ನಮ್ಮ ಮನೆಯ ಪುಟ್ಟ ಗ್ರಂಥಾಲಯ - *"ಜ್ಞಾನ ಚಿರಂತನ"*
ಪುಸ್ತಕಗಳು ನಮ್ಮ ನಿಜವಾದ ಸ್ನೇಹಿತರು. ಅವು ನಮಗೆ ಜ್ಞಾನವನ್ನು ನೀಡುವುದರ ಜೊತೆಗೆ, ಜೀವನವನ್ನು ನೋಡುವ ಹೊಸ ದೃಷ್ಟಿಕೋನವನ್ನೂ ನೀಡುತ್ತವೆ.
ಪ್ರತಿಯೊಂದು ಪುಸ್ತಕವೂ ಒಂದೊಂದು ಹೊಸ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ.
ಬಾಲ್ಯದಿಂದಲೂ ನನಗೆ ಓದುವ ಹವ್ಯಾಸ. ನಮ್ಮ ಮನೆಯಲ್ಲಿ ಇರುವ ಚಿಕ್ಕ ಪುಸ್ತಕ ಸಂಗ್ರಹವು ನನ್ನ ಶಬ್ದಸಂಪತ್ತು ಮತ್ತು ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಬಹಳ ಸಹಾಯ ಮಾಡಿದೆ.
ಪುಸ್ತಕಗಳನ್ನು ಓದುವ ಮೂಲಕ ನಾವು ವಿವಿಧ ವ್ಯಕ್ತಿಗಳ ಅನುಭವಗಳು, ಭಾವನೆಗಳು ಮತ್ತು ಆಲೋಚನೆಗಳನ್ನು ಅರ್ಥಮಾಡಿಕೊಳ್ಳಬಹುದು. ಓದುವ ಹವ್ಯಾಸವು ನಮ್ಮ ಏಕಾಗ್ರತೆ ಮತ್ತು ಕಲ್ಪನಾಶಕ್ತಿಯನ್ನು ಹೆಚ್ಚಿಸುತ್ತದೆಯೆನ್ನುವುದು ನಿಜವಾಗಲೂ ಸತ್ಯದ ಮಾತು.
ಪುಸ್ತಕಗಳನ್ನು ಓದುವಾಗ ನನಗೆ ಅಪಾರ ನೆಮ್ಮದಿ ದೊರೆಯುತ್ತದೆ ಮತ್ತು ಮನಸ್ಸು ಹಗುರವಾಗುತ್ತದೆ. ಇನ್ನೂ ಪುಸ್ತಕ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳದಿದ್ದ ನನ್ನ ವಯಸ್ಸಿನವರು ಯಾರಾದರೂ ಇದ್ದಲ್ಲಿ ಖಂಡಿತವಾಗಿಯೂ ಅದನ್ನು ಆರಂಭಿಸಲೇಬೇಕು ಎನ್ನುವುದು ನನ್ನ ಅಭಿಪ್ರಾಯ.
ಉತ್ತಮ ಪುಸ್ತಕಗಳು ನಮ್ಮಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತವೆ. ಅವು ಕಷ್ಟದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾರ್ಗದರ್ಶನ ನೀಡುತ್ತವೆ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯ ನಡುವೆ ಪುಸ್ತಕ ಓದುವ ಹವ್ಯಾಸಕ್ಕೆ ಸಮಯ ಮೀಸಲಿಡುವುದು ಬಹಳ ಮುಖ್ಯ. ಪ್ರತಿದಿನ ಸ್ವಲ್ಪ ಸಮಯವಾದರೂ ಪುಸ್ತಕ ಓದುವುದರಿಂದ ನಮ್ಮ ಜ್ಞಾನ ಮತ್ತು ಚಿಂತನಾ ಸಾಮರ್ಥ್ಯ ವೃದ್ಧಿಯಾಗುತ್ತದೆ.
ಈಗಾಗಲೇ ಓದುವ ಹವ್ಯಾಸ ಹೊಂದಿರುವವರು ಸಾಮಾನ್ಯ ಕಾದಂಬರಿಗಳು ಮತ್ತು ಕಥೆಗಳನ್ನು ಓದುವುದರ ಜೊತೆಗೆ, ಜೀವನಕ್ಕೆ ಹೆಚ್ಚು ಅರ್ಥ ನೀಡುವ ಮತ್ತು ಆಳವಾದ ಚಿಂತನೆಗೆ ಪ್ರೇರೇಪಿಸುವ ಸಾಹಿತ್ಯ ಕೃತಿಗಳನ್ನೂ ಓದಬೇಕು.
ಒಟ್ಟಿನಲ್ಲಿ, ನಮ್ಮ ಮನೆಯಲ್ಲಿರುವ ಈ ಪುಟ್ಟ ಗ್ರಂಥಾಲಯವು ಇಂದು ನಾನು ರೂಪುಗೊಂಡಿರುವ ವ್ಯಕ್ತಿತ್ವವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಮುಂದಿನ ದಿನಗಳಲ್ಲಿಯೂ ಅದು ನನ್ನ ವ್ಯಕ್ತಿತ್ವ ವಿಕಸನಕ್ಕೆ ಹೀಗೆಯೇ ಕೊಡುಗೆ ನೀಡುತ್ತಿರಲಿ ಎಂದು ಆಶಿಸುತ್ತೇನೆ.
ಜತೆಗೆ ಪ್ರತಿಯೊಂದು ಮನೆಯಲ್ಲೂ ಒಂದು ಪುಟ್ಟ ಗ್ರಂಥಾಲಯವಿರಲಿ ಮತ್ತು ಪ್ರತಿಯೊಬ್ಬರ ಬದುಕಿನಲ್ಲೂ ಪುಸ್ತಕಗಳಿಗೆ ವಿಶೇಷ ಸ್ಥಾನವಿರಲಿ ಎಂಬ ಆಶಯ ನನ್ನದು.
ಧನ್ಯವಾದಗಳು.
ವಂದನೆಗಳೊಂದಿಗೆ,
ಚಿರ ಶೆಟ್ಟಿ
12ನೇ ತರಗತಿ
ಕ್ರಿಯೇಟಿವ್ ಪ್ರೀ-ಯೂನಿವರ್ಸಿಟಿ ಕಾಲೇಜು, ಕಾರ್ಕಳ