ಶೇಷಪ್ಪ ರಾತ್ರಿ ಹೊತ್ತು ಗೌತಮ ರೆಡ್ಡಿಯ ಮನೆಯಿಂದ ಬರುವಾಗ ಎದುರಿನಿಂದ ಬಂದ ಕಾರು ಅವನ ಕಾರಿಗೆ ಡಿಕ್ಕಿ ಹೊಡೆದು ತಲೆಕೆಳಗಾಗಿ ಬಿತ್ತು. ಅದರ ಒಳಗೆ ಯಾರಿದ್ದಾರೋ ಗೊತ್ತಿಲ್ಲ. ಸಹಾಯಕ್ಕೆ ಧಾವಿಸಿದ. ಕಾರಿನ ಒಳಗಿದ್ದ ಅವಳು ಸಹಾಯ ಯಾಚಿಸಿದಳು. ಅವಳನ್ನು ಅಪಾರ್ಟ್ಮೆಂಟ್ ವರೆಗೂ ಬಿಟ್ಟು ಬಂದ. ಅಲ್ಲಿಂದ ಸಮಸ್ಯೆ ಶುರುವಾಯಿತು. ಅದೇ ಹೊತ್ತು ಗೌತಮ್ ರೆಡ್ಡಿಯ ಕೊಲೆಯಾಯಿತು. ಶೇಷಪ್ಪ ಪತ್ತೇದಾರ ಸಂಪತ್ ಕುಮಾರ್ ನ ಬಳಿ ಓಡಿದ. ಪತ್ತೇದಾರಿಕೆ ಶುರುವಾಯಿತು. ಕಾರಿನಲ್ಲಿ ಒಬ್ಬಳು ಇದಿದ್ದಲ್ಲ. ಇನ್ನೂ ಒಬ್ಬಳಿದ್ದಳು... ಕೊಲೆ ಮಾಡಿದ್ದು ಯಾರು? ಸಾಕ್ಷಿಗಳೆಲ್ಲ ಶೇಷಪ್ಪನ ವಿರುದ್ಧವಾಗಿದ್ದವು.... ಇದೊಂದು ಕೋರ್ಟ್ ರೂಮ್ ಕೇಸ್....