ಪ್ರಸ್ತುತ ಜಮಾನದಲ್ಲಿ ನಿಸ್ವಾರ್ಥ ಮನಸ್ಸಿನ ಯುವ ಪೀಳಿಗೆ ಕಾಣಸಿಗುವುದು ಅಪರೂಪ. ಎಲ್ಲೋ ನೋಡಿದ ಕೇಳಿದ ಆದರ್ಶಗಳನ್ನು ಪಾಲಿಸಿಕೊಂಡು ಬಂದಿರುವ ವ್ಯಕ್ತಿಯ ಚಿತ್ರಣ ನನ್ನ ಮನಸ್ಸಿನಲ್ಲಿ ಮೂಡಿತು. ಅದೇ ವ್ಯಕ್ತಿತ್ವವನ್ನು ಈ ಕಾದಂಬರಿಯಲ್ಲಿ ಒಂದು ಪಾತ್ರವನ್ನಾಗಿಸಿದೆ. ಅಂತಹ ಯುವಕನ ಜೊತೆಯಾಗಿ ಬೆಳೆಯೋಣ ಎನ್ನುವ ಧ್ಯೇಯ ನನ್ನನ್ನು ಬಹಳವಾಗಿ ಕಾಡಿತ್ತು. ನವಿರಾದ ಪ್ರೇಮ ಕಥೆಯ ಜೊತೆಗೆ ಆರ್ಯನ್ ಹಾಗೂ ಚಿಗುರು ಪಾತ್ರಗಳು ಮನಸ್ಸಿಗೆ ಮುದ ನೀಡುವಂತಿದೆ.