Radhadevi H G

Radhadevi H G
30 books

Author

Radhadevi H G

ಎಚ್.ಜಿ.ರಾಧಾದೇವಿಯವರು ಕನ್ನಡದ ಜನಪ್ರಿಯ ಲೇಖಕಿಯರಲ್ಲೊಬ್ಬರು. ಇವರು ಮೂವತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ.
ರಾಧಾಮಣಿಯವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌ರವರು ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.ಎಸ್.ಎಸ್.ಎಲ್.ಸಿ.ಯ ನಂತರ ಮುಂದಿನ ಓದಿಗೆ ತಡೆಯುಂಟಾಗಿ ಬಿಡುವಿನ ವೇಳೆಯಲ್ಲಿ ಪ್ರಾರಂಭಿಸಿದ ಮನೆ ಪಾಠ ಆರಂಭಿಸಿದರು.ಇದರಿಂದ ದೊರೆತ ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ಹದಿನೆಂಟನೇ ವಯಸ್ಸಿಗೆ ಕೋಲಾರದ ಮೆಥೊಡಿಸ್ಟ್ ಮಿಷಿನ್ ಶಾಲೆಯಲ್ಲಿ ಉದ್ಯೋಗ ದೊರಕಿತು. ಬಾಲ್ಯದಿಂದಲೂ ರೂಢಿಸಿಕೊಂಡಿದ್ದ ವಿಸ್ತ್ರತ ಓದು ಬರವಣಿಗೆಯನ್ನು ಪ್ರಾರಂಭಿಸಲು ಉತ್ತೇಜನ ನೀಡಿತು.
ರಾಧಾದೇವಿ’ ಎಂಬ ಕಾವ್ಯನಾಮದಿಂದ ಸಣ್ಣ ಕಥೆಗಳು, ವಿವಿಧ ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ಪತ್ರಿಕೆಗಳಿಗೆ ಬರೆದಿದ್ದಾರೆ. ದುಡಿಯುವ ಮಹಿಳೆಯರ ಸಮಸ್ಯೆಗಳ ಬಗ್ಗೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ‘ಆಫೀಸ್ ಹೊತ್ತಿಗೆ ಅನಂತನ ಅವಾಂತರಗಳು’ ಎಂಬ ಹಾಸ್ಯ ಲೇಖನದಲ್ಲಿ ಪತಿಯ ಆಫೀಸ್ ತರಾತುರಿ, ಮಕ್ಕಳ ಕೋಟಲೆ, ಗೃಹಿಣಿಯ ಗಡಿಬಿಡಿಗಳನ್ನು ಚಿತ್ರಿಸಿದ್ದು ಓದುಗರಿಂದ ದೊರೆತ ಅಪಾರ ಮೆಚ್ಚುಗೆ. ಮೊದಲ ಪ್ರಕಟಿತ ಕಾದಂಬರಿ ‘ಸುವರ್ಣ ಸೇತುವೆ’. ಇದಕ್ಕೆ ಮುನ್ನ ಒಂಬತ್ತು ಕಾದಂಬರಿಗಳನ್ನು ಬರೆದಿದ್ದರು. ಪ್ರಜಾಮತ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ‘ಸುವರ್ಣ ಸೇತುವೆ’ಯು ಪ್ರಕಟ,ನಂತರ ಹಿಂದೆ ಬರೆದ ಇತರ ಕಾದಂಬರಿಗಳಿಗೂ ಪ್ರಕಟವಾದವು.ಎಂಬತ್ತೆಂಟು ಕಾದಂಬರಿ,ಮೊದಲ ಹನ್ನೆರಡು ಕಾದಂಬರಿಗಳು ಮೂರಕ್ಕೂ ಹೆಚ್ಚು ಮುದ್ರಣ ಕಂಡಿವೆ. ಇವರ ಕಾದಂಬರಿಗಳನ್ನು ಹಲವಾರು ವಾರ, ಮಾಸ ಪತ್ರಿಕೆಗಳು ಪ್ರಕಟಿಸಿವೆ. ಮಲ್ಲಿಗೆ, ಹಂಸರಾಗ, ಮಂಜುವಾಣಿ,ತರಂಗ,ಕರ್ಮವೀರ ಪತ್ರಿಕೆಗಳು ಪ್ರಕಟಿಸಿದವು.ಎಂಟು ಪೌರಾಣಿಕ ಕಾದಂಬರಿಗಳನ್ನು ಬರೆದಿದ್ದಾರೆ ,ಅಹಲ್ಯಾ, ದ್ರೌಪದಿ, ಸೀತಾ, ತಾರಾ, ಮಧಡೋದರಿ ರಾಧೆಗೊಲಿದ ಕೃಷ್ಣ ಮತ್ತು ಸತ್ಯಭಾಮಾವೃತ ಶ್ರೀಕೃಷ್ಣ.

Books by Radhadevi H G

Novel

₹240

Fiction

₹255

Novel

₹260

Novel

₹225

Novel

₹210

Novel

₹210

Novel

₹180

Novel

₹150

Novel

₹140

Novel

₹115

Novel

₹120

Novel

₹100

Novel

₹100

Novel

₹100

Novel

₹100

Novel

₹110

Fiction

₹110

Novel

₹90

Novel

₹90

Novel

₹80

Novel

₹80

Novel

₹65

Novel

₹150

Novel

₹115

Fiction

₹120

Novel

₹120

Novel

₹105

Novel

₹85

Fiction

₹95

Fiction

₹70