Gururaj Sanil

Gururaj Sanil

ಜೀವದಯೆ ಮತ್ತು ಪರಿಸರ ಪ್ರೀತಿಗೆ ಮತ್ತೊಂದು ಹೆಸರಾಗಿರುವ ಗುರುರಾಜ್ ಸನಿಲ್ ಅವರು ನಾಡಿನ ಪ್ರಮುಖ ಉರಗ ತಜ್ಞರಲ್ಲಿ ಒಬ್ಬರಾಗಿದ್ದಾರೆ. ಅವರ ಸೇವೆ ಕರಾವಳಿ ಭಾಗದಲ್ಲಿ ಅಗತ್ಯವಾದಷ್ಟೇ, ಕರ್ನಾಟಕದಾದ್ಯಂತ ಅವರ ಜೀವನಾನುಭವ, ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಗಳಿಗೆ ಹೆಚ್ಚಿನ ಬೇಡಿಕೆಯಿದೆ.

ನಗರೀಕರಣ, ಮಾನವ ಕ್ರೌರ್ಯ ಹಾಗೂ ಸಾಕುಪ್ರಾಣಿಗಳ ದಾಳಿಯಿಂದ ಗಾಯಗೊಂಡ ಸಾವಿರಾರು ಹಾವುಗಳಿಗೆ ಅವರು ಸೂಕ್ತ ಚಿಕಿತ್ಸೆ ನೀಡುವುದರೊಂದಿಗೆ, ಅನೇಕ ಹಾವುಗಳ ಮೊಟ್ಟೆಗಳನ್ನು ರಕ್ಷಿಸಿ, ಅವುಗಳಿಗೆ ಸೂಕ್ತ ಕಾವು ಒದಗಿಸಿ ಮರಿಗಳು ಜನಿಸುವಂತೆ ಮಾಡುತ್ತಿದ್ದಾರೆ.

ಉಡುಪಿ ಜಿಲ್ಲೆಯ ತೆಂಕುಪೇಟೆಯಲ್ಲಿ ಜನಿಸಿದ ಗುರುರಾಜ್ ಸನಿಲ್ ಅವರ ತಂದೆ ಶೇಷಪ್ಪ ಮತ್ತು ತಾಯಿ ಸುಂದರಿ. ಅವರು ತಮ್ಮ ಪ್ರಾಥಮಿಕ ಶಿಕ್ಷಣ ಉಡುಪಿಯ ಕಡಿಯಾಳಿ ಶಾಲೆಯಲ್ಲಿ ಪೂರೈಸಿ, ಪ್ರೌಢ ಶಿಕ್ಷಣವನ್ನು ಮುಂಬೈ ಪೋರ್ಟ್ ಹೈಸ್ಕೂಲಿನಲ್ಲಿ ಮುಗಿಸಿದರು.

ಶಾಲಾ ದಿನಗಳಲ್ಲಿ, ವಿಜ್ಞಾನ ಶಿಕ್ಷಕ ದಾಮೋದರ ಆಚಾರ್ಯರು ಶಾಲೆಯಲ್ಲಿ ಸಾಕುತ್ತಿದ್ದ ಹೆಬ್ಬಾವಿನ ಬಗ್ಗೆ ಉಂಟಾದ ಕುತೂಹಲದಿಂದ ಅವರು ಹಾವುಗಳ ಅಧ್ಯಯನ ಮತ್ತು ಸಂರಕ್ಷಣೆಯತ್ತ ಆಕರ್ಷಿತರಾದರು. ಕಳೆದ 38 ವರ್ಷಗಳಲ್ಲಿ, ಸಾರ್ವಜನಿಕರಿಗೆ ಆತಂಕ ಹುಟ್ಟಿಸಿದ 25,000ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಸಂರಕ್ಷಿಸಿದ ದಾಖಲೆಯು ಅವರದಾಗಿದ್ದು, ಇದರಲ್ಲಿ 16 ಅಡಿ ಉದ್ದದ 55 ಕಾಳಿಂಗ ಸರ್ಪಗಳೂ ಸೇರಿವೆ.

Books By Gururaj Sanil