ಗೋಪಾಲಕೃಷ್ಣ ಮಧ್ಯಸ್ಥ (ಜಿ.ಕೆ. ಮಧ್ಯಸ್ಥ) ಸಾಹಿತ್ಯ ಮತ್ತು ಪತ್ರಿಕೋದ್ಯಮ ಎರಡರಲ್ಲೂ ಸಮಾನ ಆಸಕ್ತಿ ಹೊಂದಿರುವ ಪ್ರಖ್ಯಾತ ಪತ್ರಕರ್ತರಾಗಿದ್ದಾರೆ. ಅವರು ಪ್ರಜಾವಾಣಿ, ವಿಜಯ ಕರ್ನಾಟಕ ಸೇರಿದಂತೆ ವಿವಿಧ ಕನ್ನಡ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಪತ್ರಿಕೆಗಳ ಭಾಷೆಯ ಬಳಕೆ ಮತ್ತು ಅವುಗಳಲ್ಲಿ ನಡೆದ ಬದಲಾವಣೆಗಳನ್ನು ವಿಶ್ಲೇಷಿಸುವಲ್ಲಿ ಅವರಿಗೆ ವಿಶೇಷ ರುಚಿ ಇದೆ.
ನಿವೃತ್ತಿಯ ಬಳಿಕ ಉಡುಪಿಯಲ್ಲಿ ನೆಲೆಸಿರುವ ಮಧ್ಯಸ್ಥ ಅವರು, ‘ದುಡ್ಡು ಕಾಸು’ ಮತ್ತು ‘ಪದೋನ್ನತಿ’ ಎಂಬ ತಮ್ಮ ಅಂಕಣ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ.
ಗೋಪಾಲಕೃಷ್ಣ ಮಧ್ಯಸ್ಥ ಜನಿಸಿದ್ದು ಕಾಸರಗೋಡು ಸಮೀಪದ ಕುಂಜ್ಯಾರು ಗ್ರಾಮದಲ್ಲಿ.