ವಿರೂಪಾಕ್ಷ ಬೆಳವಾಡಿ, ಚಿಕ್ಕಮಗಳೂರು ಜಿಲ್ಲೆ ಬೆಳವಾಡಿಯವರು. ಸುಮಾರು 25 ವರ್ಷಗಳಿಂದ ಯೋಗಕ್ಷೇತ್ರದಲ್ಲಿದ್ದು ನಾಡಿನಾದ್ಯಂತ ಯೋಗದ ಮೂಲಕ ಆರೋಗ್ಯವೃದ್ಧಿಗೆ ಶ್ರಮಿಸುತ್ತಿದ್ದಾರೆ. ಯೋಗಕ್ಷೇಮ ಎಂಬ ಸಂಸ್ಥೆಯ ಮೂಲಕ ಯೋಗ ಶಿಬಿರಗಳನ್ನು ನಡೆಸುತ್ತಿದ್ದು, ಸೂರ್ಯೋಪಾಸನೆ, ಸಂಸ್ಕಾರ ಸಿಂಚನ ,ಜನನಿ, ಸಾಧನಗಳೊಂದಿಗೆ ಯೋಗಸಾಧನೆ ಎಂಬ 7 ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯಲೋಕ ಪಬ್ಲಿಕೇಷನ್ಸ್‌ನಿಂದ ಸಾವಿರದ ಸತ್ಯ,ಜನನಿ,ಆತ್ಮದರ್ಶನ ಎಂಬ 3 ಪುಸ್ತಕಗಳು ಪ್ರಕಟವಾಗಿವೆ.
ವಿಜಯ ಕರ್ನಾಟಕ ಪತ್ರಿಕೆಯಲ್ಲಿ “ಡೈಲಿಯೋಗ” ಎಂಬ ಹೆಸರಿನ ಯೋಗಕ್ಕೆ ಸಂಬಂಧಿಸಿದಂತೆ 650ಕ್ಕೂ ಹೆಚ್ಚು ಅಂಕಣಗಳನ್ನು ಬರೆದಿದ್ದು, ಇವರ ಯೋಗಸಾಧನೆ ಗುರುತಿಸಿ 2018ರಲ್ಲಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಹಾಗೂ ನಾಡ ಭೂಷಣ ಪ್ರಶಸ್ತಿ ಲಭಿಸಿದೆ.