Veerakaputra Srinivasa

Veerakaputra Srinivasa

ವೀರಕಪುತ್ರ ಎಂ ಶ್ರೀನಿವಾಸ / ವೀರಕಪುತ್ರ ಶ್ರೀನಿವಾಸ ( 8 ಜೂನ್ 1982 -) ಎಂಬ ಹೆಸರಿನಿಂದ ಜನಪ್ರಿಯವಾಗಿರುವ ವೀರಕಪುತ್ರ ಮುನಿವೆಂಕಟಪ್ಪ ಶ್ರೀನಿವಾಸ  ಅವರು ಕರ್ನಾಟಕದ ಒಬ್ಬ ಪುಸ್ತಕೋದ್ಯಮಿ, ಪ್ರಕಾಶಕ, ಸಾಮಾಜಿಕ ಕಾರ್ಯಕರ್ತ, ಫಸ್ಟ್ ಫೋರ್ಸ್ ಕಟ್ಟಡ ಸುರಕ್ಷಣಾ ಸೇವಾ ಸಂಸ್ಥೆ ಮಾಲೀಕ ಮತ್ತು ಕನ್ನಡ ಚಲಚಿತ್ರರಂಗದಲ್ಲಿ ನಟ ಡಾ ವಿಷ್ಣುವರ್ಧನ್ ಅಭಿಮಾನಿಗಳ ಡಾ. ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷರು. ಅವರು ವೀರಲೋಕ ಬುಕ್ಸ್ ಎಂಬ ಪುಸ್ತಕ ಪ್ರಕಾಶಕ ಸಂಸ್ಥೆ, ಕನ್ನಡ ಮಾಣಿಕ್ಯ ಪತ್ರಿಕೆ ಮತ್ತು ಬುಕ್ಸ್ ಬರ್ಗರ್ ಕಾಫಿ (ಬಿಬಿಸಿ) ಮಳಿಗೆಯನ್ನು ಆರಂಭಿಸಿ ಅದರ ವ್ಯವಸ್ಥಾಪಕ ನಿರ್ದೇಶಕರಾಗಿ ನಡೆಸುತ್ತಿದ್ದಾರೆ.

ಶ್ರೀನಿವಾಸ ಅವರು ವೀರಕಪುತ್ರ ಗ್ರಾಮ , ಮಾಲೂರು ತಾಲೂಕು , ಕೋಲಾರ ಜಿಲ್ಲೆಯಲ್ಲಿ 8 ಜೂನ್ 1982 ರಂದು ಜನಿಸಿದರು. ಇವರ ತಂದೆ ಮುನಿವೆಂಕಟಪ್ಪನವರು ಮತ್ತು ತಾಯಿ ನಾರಾಯಣಮ್ಮನವರು.

ಇವರು ಕೆ.ಜಿ.ಎಫ್ ನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಾಪದವಿ ಪಡೆದರು.

Books By Veerakaputra Srinivasa