Veerabhadappa

Veerabhadappa

ಕುಂ. ವೀರಭದ್ರಪ್ಪ ಅವರು ಕನ್ನಡದ ಖ್ಯಾತ ಸಾಹಿತಿ. ಅವರ ಅರಮನೆ ಕೃತಿಗೆ ೨೦೦೭ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ.
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನಲ್ಲಿ ಅಕ್ಟೋಬರ್ ೧, ೧೯೫೩ರಲ್ಲಿ ಜನನ. ತಂದೆ ಕುಂಬಾರ ಹಾಲಪ್ಪ, ತಾಯಿ ಕೊಟ್ರಮ್ಮ, ಪತ್ನಿ ಅನ್ನಪೂರ್ಣ. ಮಕ್ಕಳು ಪುರೂರವ, ಶಾಲಿವಾಹನ ಮತ್ತು ಪ್ರವರ. ಮೊಮ್ಮಗ ಅಥರ್ವ. ಎಂ ಎ ಪದವೀಧರರು. ಆಂಧ್ರಪ್ರದೇಶದ ಹಳ್ಳಿಗಳಲ್ಲಿ ೩೫ ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವರು. ಗ್ರಾಮೀಣ ಬದುಕಿನ ಸಂವೇದನೆಗಳನ್ನು ತಮ್ಮ ಕೃತಿಗಳಲ್ಲಿ ಸಮರ್ಥವಾಗಿ ಬಳಸಿಕೊಂಡಿರುವ ಬರಹಗಾರ. ಇವರು ಬಳಸುವ ಭಾಷೆಯೂ ಕೂಡ ವಿಶಿಷ್ಟವಾದುದು. ಬಿರುಬಿಸಿಲು ನಾಡಿನ ಬಳ್ಳಾರಿ ಪ್ರದೇಶದ ಗಂಡು ಭಾಷೆಯೇ ಇವರ ಬರಹಕ್ಕೆ ಮತ್ತಷ್ಟು ಶಕ್ತಿ ನೀಡಿವೆ. ಈಗ ತಮ್ಮ ಜನ್ಮಸ್ಥಳವಾದ ಬಳ್ಳಾರಿ ಜಿಲ್ಲೆಯ ಕೊಟ್ಟೂರಲ್ಲಿ ನೆಲಸಿದ್ದಾರೆ

Books By Veerabhadappa