Tiger B B Ashok Kumar

Tiger B B Ashok Kumar

ಸಹಾಯಕ ಪೊಲೀಸ್ ಅಧಿಕಾರಿಯಾಗಿದ್ದ ಬಿ.ಬಿ. ಅಶೋಕಕುಮಾರ ಅವರು ಟೈಗರ್ ಅಶೋಕಕುಮಾರ್ ಎಂದೇ ಖ್ಯಾತಿ. ಬೆಂಗಳೂರಿನಲ್ಲಿ (1983) ಸರಗಳ್ಳರ ಹಾವಳಿ ಮಟ್ಟಹಾಕಲು ರಚಿಸಿದ್ದ ಆಪರೇಷನ್ ಟೈಗರ್’ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಜನರು ಅವರಿಗೆ ನೀಡಿದ ಬಿರುದು -ಟೈಗರ್. ವೃತ್ತಿಯಲ್ಲಿಯ ಈ ಸಾಹಸ-ಧೈರ್ಯದ ಹಿನ್ನೆಲೆಯಲ್ಲಿ ಹಲವು ಚಲನಚಿತ್ರಗಳು ತೆರೆ ಕಂಡವು. ಆ ಪೈಕಿ, ದೇವರಾಜ್ ಅಭಿನಯದ ಸರ್ಕಲ್ ಇನ್ಸಪೆಕ್ಟರ್, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಬಾ ನಲ್ಲೆ ಮಧುಚಂದ್ರಕೆ,ಇತ್ತೀಚಿನ ಮೈನಾ, ಹೀಗೆ ಹಲವಾರು..
ಕಾರ್ಯದಕ್ಷತೆಗೆ ಹೆಸರಾಗಿದ್ದ ಅಶೋಕಕುಮಾರ್, ನರಹಂತಕ ವೀರಪ್ಪನ್ ಹಿಡಿಯಲು ವಿಶೇಷ ತನಿಖಾ ದಳದೊಂದಿಗೆ ಮಲೆ ಮಾದೇಶ್ವರ ಬೆಟ್ಟಕ್ಕೆ ಹೋಗುವ ಮುನ್ನ ಪತ್ನಿಗೆ ವೈಧವ್ಯದ ಪಾಠ ಹೇಳಿ ಧೈರ್ಯ ತುಂಬಿದ್ದರು.

ಕೃತಿಗಳು: ಬೆಂಗಳೂರಿನ ವೃತ್ತಿ ಜೀವನಕ್ಕೆ ಸಂಬಂಧಿಸಿದ ಕೃತಿ-ಬುಲೆಟ್ ಸವಾರಿ ಹಾಗೂ ನರಹಂತಕ ವೀರಪ್ಪನ್ ವಿರುದ್ಧ ನಡೆದ ಕಾರ್ಯಾಚರಣೆಯ ಅನುಭವನಗಳ ಸಂಗ್ರಹ ಕೃತಿ- ಹುಲಿಯ ನೆನಪುಗಳು-ಇವು ಪ್ರಮುಖ ಕೃತಿಗಳು. ಇಲ್ಲಿಯ ಬರಹಗಳು ಪತ್ರಿಕೆಗಳ ಅಂಕಣಗಳಾಗಿ ಪ್ರಕಟಗೊಂಡಿದ್ದವು.
ಪ್ರಶಸ್ತಿ-ಪುರಸ್ಕಾರಗಳು: ಶೌರ್ಯ ಪದಕ (1986) [president of indian tallent gold medal] 1998ರಲ್ಲಿ ಪೊಲೀಸ್ ವಿಶಿಷ್ಟ ಸೇವಾ ಪದಕ / ಪೊಲೀಸ್ ಶ್ಲಾಘನೀಯ ಸೇವಾ ಪದಕ ಹಾಗೂ 2011ರಲ್ಲಿ ಕೆಂಪೇಗೌಡ ಪ್ರಶಸ್ತಿ ಲಭಿಸಿದೆ.

Books By Tiger B B Ashok Kumar