ಶ್ರೀ ರಾಮಕೃಷ್ಣ ಶಾರದಾಶ್ರಮದ ಹಿರಿಯ ಸ್ವಾಮೀಜಿಯಾಗಿದ್ದ ಜಗದಾತ್ಮನಂದ ಜೀ ಇವರು 9 ಭಾಷೆಗಳಿಗೆ ಭಾಷಾಂತರವಾಗಿರುವ ‘ಬದುಕಲು ಕಲಿಯಿರಿ’ ಕೃತಿ ರಚಿಸಿ ಖ್ಯಾತರಾಗಿದ್ದರು. ಮೊದಲನೆಯ ಭಾಗ 1981ರಲ್ಲಿ ಪ್ರಕಟವಾಗಿದ್ದು, ಹದಿಮೂರನೆಯ ಮುದ್ರಣ 2003 ರಲ್ಲಿ ಪ್ರಕಟವಾಯಿತು. ಈ ವೇಳೆ, ಒಟ್ಟು 85 ಸಾವಿರ ಪ್ರತಿಗಳು ಮಾರಾಟವಾಗಿದ್ದವು. ಇದರ ಎರಡನೆಯ ಭಾಗ 1986ರಲ್ಲಿ ಬೆಳಕಿಗೆ ಬಂತು. ಇದರ ಒಂಭತ್ತನೆಯ ಮುದ್ರಣ 2002 ರಲ್ಲಿ ಪ್ರಕಟವಾಯ್ತು. ಒಟ್ಟು 78,000 ಮಾರಾಟವಾಗಿವೆ.
ಇವುಗಳ ಮೂರು ಪರಿಷ್ಕೃತ ಸಂಯುಕ್ತ ಆವೃತ್ತಿಗಳು ಪ್ರಕಟವಾಗಿವೆ. ಮತ್ತೆ 20,000 ಪ್ರತಿಗಳು ಮಾರಾಟವಾಗಿವೆ. ಕನ್ನಡದ ಮಟ್ಟಿಗೆ ಇದೊಂದು ದಾಖಲೆಯೇ. ಇಲ್ಲಿಯವರೆಗೆ ಮೂರು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟಗೊಂಡಿವೆ.