Sudha Murty

Sudha Murty

ಸುಧಾ ಮೂರ್ತಿ ಕನ್ನಡ ಮತ್ತು ಇಂಗ್ಲಿಷ್ ನ ಬರಹಗಾರ್ತಿ, ಸುಧಾ ತಮ್ಮ ವೃತ್ತಿಪರ ಜೀವನವನ್ನು ಕಂಪ್ಯೂಟರ್ ವಿಜ್ಞಾನಿ ಮತ್ತು ಎಂಜಿನಿಯರ್ ಆಗಿ ಆರಂಭಿಸಿದರು. ಅವರು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದಾರೆ ಹಾಗೂ ‘ಬಿಲ್ ಗೇಟ್ಸ್ ಪ್ರತಿಷ್ಠಾನ’ದ ಸಾರ್ವಜನಿಕ ಆರೋಗ್ಯ ಉಪಕ್ರಮಗಳ ಸದಸ್ಯರಾಗಿದ್ದಾರೆ
ಶ್ರೀಮತಿ ಸುಧಾ ಮೂರ್ತಿಯವರು ಲೇಖಕಿಯಾಗಿ ಅನೇಕ ಕಥೆಗಳನ್ನು, ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಬರವಣಿಗೆಗಳು ಜನಸಾಮಾನ್ಯನ ಜೀವನದ ಕಂಪನ್ನು ಸೂಸುತ್ತವೆ. ಅವರು ಆತಿಥ್ಯ, ತಮ್ಮ ಬಾಲ್ಯ, ದೇಣಿಗೆ ಮತ್ತು ದಾನದ ಬಗೆಗಿನ ಅಭಿಪ್ರಾಯಗಳನ್ನು ಅರಿತುಕೊಳ್ಳುವುದು ಮೊದಲಾದವುಗಳ ಬಗ್ಗೆ ಬರೆಯುತ್ತಾರೆ. ಅವರ ಅನೇಕ ಪುಸ್ತಕಗಳು ಇಂಗ್ಲಿಷ್‌ಗೆ ಭಾಷಾಂತರಗೊಂಡಿವೆ ಮತ್ತು ಕೆಲವು ಟಿವಿ ಸರಣಿಗಳಾಗಿ ರೂಪಾಂತರಗೊಂಡಿವೆ. ಅವರ ಅನೇಕ ಕೃತಿಗಳು ಮಕ್ಕಳ ಸರಣಿಗಳಾಗಿವೆ. ಸುಧಾ ಮೂರ್ತಿಯವರು ಕನ್ನಡ ಮತ್ತು ಇಂಗ್ಲಿಷ್‌ನ ಅನನ್ಯ ಕಾದಂಬರಿ ಬರಹಗಾರ್ತಿ.
ಸುಧಾ ಮೂರ್ತಿ ತಮ್ಮ ಶಿಕ್ಷಣದ ಆರಂಭದಿಂದಲೂ, ಅವರು ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಚೆನ್ನೈನಲ್ಲಿ 2004 ರಲ್ಲಿ ಶ್ರೀ ರಾಜಲಕ್ಷ್ಮಿ ಫೌಂಡೇಶನ್ ನಿಂದ ರಾಜಲಕ್ಷ್ಮಿ ಪ್ರಶಸ್ತಿಯ ಮನ್ನಣೆ ಪಡೆದರು. ಸಮಾಜ ಸೇವೆಯಲ್ಲಿ ತಮ್ಮ ಅಸಾಮಾನ್ಯ ಸಾಧನೆಗಾಗಿ ಅವರು ಆ ಪ್ರಶಸ್ತಿಯನ್ನು ಪಡೆದಿದ್ದರು. ಅವರು ಭಾರತದ ಸರ್ಕಾರದ ನಾಲ್ಕನೇ ಅತ್ಯುನ್ನತ ಪುರಸ್ಕಾರವಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ
ಕರ್ನಾಟಕ ಸರಕಾರದ ಅತ್ಯುನ್ನತ ಗೌರವವಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಕೂಡ ಅವರು ಭಾಜನರಾಗಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ ತನ್ನ ನೂರನೇ ಘಟಿಕೋತ್ಸವದಲ್ಲಿ, ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.

Books By Sudha Murty