ಶ್ಯಾಮಲಾ, ‘ನಾರಾಯಣ.ಯು’, ಮತ್ತು ‘ವಸಂತಿ’ ದಂಪತಿಗಳ ಪ್ರೇಮದ ಮಗಳಾಗಿ, ೧೯೪೯ ರ ಜೂನ್, ೨೯ ರಂದು,ಮಂಗಳೂರಿನ ಹತ್ತಿರದ ಕೊಡಿಯಾಲಗುತ್ತು ಪ್ರದೇಶದ ಮನೆಯಲ್ಲಿ ಜನಿಸಿದರು. ತಂದೆಯವರು, ಸೋಮೇಶ್ವರ ಉಚ್ಚಿಲದ ‘ಶಾಲಾ ಕರೆಸ್ಪಾಂಡೆಂಟ್’ ಆಗಿ ಶೈಕ್ಷಣಿಕ ಕ್ಷೇತ್ರ ಮತ್ತು ಸಹಕಾರಿ ಕ್ಷೇತ್ರದಲ್ಲಿ ದುಡಿದರು. ಮಿತಮಾತಿನ, ಸತ್ಯನಿಷ್ಠರಾದ, ಸುವಿಚಾರ-ಸದಾಚಾರಗಳ ತಾಯಿ, ನಗರದ ‘ಬೆಸೆಂಟ್ ಶಾಲೆ’ಯಲ್ಲಿ ಪಿ.ಟಿ.ಹಾಗೂ ಗೈಡಿಂಗ್ ಶಿಕ್ಷಕಿಯಾಗಿ ಶಿಸ್ತು, ಸೇವೆ,ಮತ್ತು ದಕ್ಷತೆಗೆ ಹೆಸರಾದವರು. ಶ್ಯಾಮಲಾ,’ಬೆಸೆಂಟ್ ರಾಷ್ಟ್ರೀಯ ಪಾಠಶಾಲೆ’ಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸದ ನಂತರ, ನಗರದ ‘ಸೇಂಟ್ ಆಗ್ನಿಸ್ ಪ್ರೌಢಶಾಲೆ’ಯಲ್ಲಿ ಹಾಗೂ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಿ, ವಿಜ್ಞಾದದ ಪದವಿಯನ್ನು ಗಳಿಸಿದರು. ಬಾಲ್ಯದಲ್ಲೇ ಮನೆಯ ಪರಿಸರದಲ್ಲಿ ದೊರೆತ ಕನ್ನಡ ಇಂಗ್ಲೀಷ್ ಭಾಷಾ ಸಾಹಿತ್ಯ ಪ್ರೀತಿ, ಶ್ಯಾಮಲಾರ ಮುಂದಿನ ಜೀವನದುದ್ದಕ್ಕೂ ಜೊತೆಯಲ್ಲಿ ಬಂತು. ಶ್ಯಾಮಲಾರ ಅಣ್ಣ, ಮೋಹನ್ ಎನ್ ಜಿ. ದಕ್ಷಿಣ ಕನ್ನಡ ಜಿಲ್ಲಾ ಸ್ಕೌಟ್ಸ್ ಕಮಿಷನರ್ . ಪಿಲಿಕುಳದಲ್ಲಿ ಸಕ್ರಿಯ ಸದಸ್ಯ. ಗಾಂಧಿ ಪ್ರತಿಷ್ಥಾನ , ರೆಡ್ ಕ್ರಾಸ್ ಸಂಸ್ಥೆಗಳಲ್ಲಿ , ಸ್ವಾಮಿ ದಯಾನಂದ ಸರಸ್ವತಿ ಆಶ್ರಮದಲ್ಲಿ ವ್ಯಸ್ತ . ಎಮಿನೆಂಟ್ ಅಲೋಶಿಯನ್ ಅವಾರ್ಡ್ ಸಮ್ಮಾನಿತ. ಸಮಾಜ ಸೇವಾಸಕ್ತ.
ಮನೆಯ ಪರಿಸರದಲ್ಲಿ ತಂದೆಯವರು ತಮ್ಮ ಪುಸ್ತಕ ಸಂಗ್ರಹಾಲಯದಲ್ಲಿ ಸಂಗ್ರಹಿಸಿಟ್ಟ ಪುಸ್ತಕಗಳಿಂದ ಶ್ಯಾಮಲರಿಗೆ ಓದುವ ಹವ್ಯಾಸ, ರಕ್ತಗತವಾಗಿ ಬಂಡ ಕಾಣಿಕೆಯಾಗಿತ್ತು. ಶಿವರಾಮ ಕಾರಂತ, ನಿರಂಜನ, ಬಸವರಾಜ ಕತ್ತೀಮನಿ, ಅ.ನ್.ಕೃ ,ತ.ರಾ.ಸು , ವ್ಯಾಸರಾಯ ಬಲ್ಲಾಳರ ಕ್ರಿತಿಗಳು ಬಾಲ್ಯದಲ್ಲೇ ಮನೆಯಲ್ಲೇ ಪ್ರಾಪ್ತವಾಯ್ತು. ರಾಜನ್ ಅಯ್ಯರ್ರ ನೃತ್ಯ ಕಲಾ ಶಿಕ್ಷಣ, ಶ್ರೀನಿವಾಸ ಉಡುಪರ ಸಂಗೀತ, ಪಿ.ಕೆ. ನಾರಾಯಣನ್ ರ, ಕನ್ನಡ ಸಾಹಿತ್ಯ ಪುಸ್ತಕ ಛಂದಸ್ಸು, ಶಾಲಾ ಲೈಬ್ರೆರಿ, ಲೈಟ್ ಹೌಸ್ ಹಿಲ್ ಲೈಬ್ರೆರಿ, ಕಾರ್ನಾಡ ಸದಾಶಿವರಾವ್ ಲೈಬ್ರೆರಿ, ಗಳ ಭೇಟಿ, ಪ್ರತಿದಿನವೂ ನಡೆಯುತ್ತಿತ್ತು. ಸಾಹಿತಿಗಳಾದ ಕಾರಂತ, ನಿರಂಜನ, ಅನಕೃ ತರಾಸು, ಕಟ್ಟಿಮನಿ, ಕೊರಟೆ, ಪುರಾಣಿಕ, ಪುರುಷೋತ್ತಮಾನ ಸಾಹಸ, ಸಚಿತ್ರ ರಾಮಾಯಣ, ಮಹಾಭಾರತ, ಚಂದಮಾಮ ಪುಸ್ತಕಗಳು ಅವರ ಸಾಹಿತ್ಯ ಅಭಿವ್ಯಕ್ತಿಗೆ ಸಾಧನಗಳಾದವು. ಮೊದಲು ಮುದಕೊಟ್ಟಿದ್ದು, ಚಿಕ್ಕ ಅನುವಾದಗಳು : ಮುರುಕು ಬಂದೂಕು, ಮಾರ್ಟಿನ್ ನ ಸಾಹಸ ಕಥೆಗಳು.
ಪ್ರಖ್ಯಾತ ಹಾಲಿವುಡ್ ಚಲನಚಿತ್ರ ಕ್ಕೆ ಪ್ರೇರಣೆಯಾದ ‘ಗಾನ್ ವಿತ್ ದ ವಿಂಡ್’, ಅನುವಾದಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಅತ್ಯುತ್ತಮ ಅನುವಾದವೆಂದು ೨೦೦೫ ರ ಎಚ್.ವಿ.ಸಾವಿತ್ರಮ್ಮ ದತ್ತಿ ನಿಧಿ ಪ್ರಶಸ್ತಿ,
‘ಗಾನ್ ವಿತ್ ದ ವಿಂಡ್’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ೨೦೦೪ ರ ಅತ್ಯುತ್ತಮ ಅನುವಾದ ಪುಸ್ತಕ ಬಹುಮಾನ,
ಅನುವಾದಕೃತಿ ಆಲಂಪನ ಕೇಂದ್ರ ಸಾಹಿತ್ಯ ಅಕಾಡೆಮಿ ಅತ್ಯುತ್ತಮ ಅನುವಾದಿತ ಕೃತಿಗೆ ಕೊನೆಯ ಸುತ್ತಿನ ಸ್ಪರ್ಧೆಗಾಗಿ ಸತತ ೨ ವರ್ಷ ಆಹ್ವಾನಿತವಾಗಿತ್ತು.
ಅನುವಾದಿತ ಕೃತಿ,’ಫ್ರಾಂಕೆನ್ ಸ್ಟೈನ್’ ಅನುವಾದ ಸಾಹಿತ್ಯ ಅಕಾಡೆಮಿಯಿಂದ ಅತ್ಯುತ್ತಮ ಅನುವಾದಕೃತಿಗಾಗಿ ಕೊನೆಯ ಸುತ್ತಿನ ಪ್ರಶಸ್ತಿಗಾಗಿ ಬಹುಮಾನ
ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ೨೦೧೦ ರಲ್ಲಿ ಗೌರವ ಪುರಸ್ಕಾರ,
ಹುಟ್ಟೂರು ಸಾಂಸ್ಕೃತಿಕ ವೇದಿಕೆಯಿಂದ ೨೦೧೦ ರಲ್ಲಿ ಗೌರವ ಪುರಸ್ಕಾರ
ಆಲಂಪನಾ ಪ್ರಕಟವಾದ ಬೆನ್ನಲ್ಲೇ ವೈ.ಎಂ.ಬಿ.ಎ, ಸಂಸ್ಥೆಯಿಂದ ಗೌರವ ಪುರಸ್ಕಾರ,
ಕಲ್ಕತ್ತಾದ ಕೃತಿ ಪ್ರಕಾಶನಕ್ಕಾಗಿ ಅನುವಾದಿತ ತುಳಸಿ ವೇಣುಗೋಪಾಲರ ‘ಹೊಂಚು’ ಕಥೆಯ ಇಂಗ್ಲೀಷ್ ಅನುವಾದ ‘ಕಥಾ’ ಸಂಚಯದಲ್ಲಿ ೨೦೧೧ ರಲ್ಲಿ ಪ್ರಕಟಿತ,
ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ ಮರಾಠಿಯಿಂದ ಅನುವಾದಿಸಿಕೊಟ್ಟ ಅಂಬೇಡ್ಕರ್ ಬರಹಗಳು, ಭಾಷಾ ಪ್ರಾಧಿಕಾರದಿಂದ ಪ್ರಕಾಶಿತ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ಪ್ರಶಸ್ತಿ ಪ್ರದಾನ, ಮೈಸೂರಿನಲ್ಲಿ (೨೦೧೫)
ಮುಂಬಯಿನ ಮೈಸೂರು ಅಸೋಸಿಯೇಷನ್ ಸಭಾಂಗಣದಲ್ಲಿ ಶ್ಯಾಮಲಾ ಮಾಧವರ ಅನುವಾದ ಕೃತಿಯನ್ನು ಸುಪ್ರೀಮ್ ಕೋರ್ಟ್ ನ ಮಾಜಿ ನಿವೃತ್ತ ನ್ಯಾಯಾಧೀಶ, ಬಿ.ಎನ್.ಶ್ರೀಕೃಷ್ಣರವರು ಬಿಡುಗಡೆಮಾಡಿದರು.
ಅವಧಿ ಸಂಸ್ಥೆ ಆಯೋಜಿಸಿದ್ದ, ಶ್ಯಾಮಲಾ ಮಾಧವರ ಕೃತಿ,’ನಾಳೆ ಇನ್ನೂ ಕಾದಿದೆ’, ಬಿಡುಗಡೆಯ ಕಾರ್ಯಕ್ರಮದಲ್ಲಿ ಡಾ.ಬಿ.ಎ.ವಿವೇಕ್ ರೈ, ಜಯಲಕ್ಷ್ಮಿ ಪಾಟೀಲ್, ಮತ್ತು ಎನ್.ದಾಮೋದರ್ ಶೆಟ್ಟಿಯವರು ಕೃತಿಯ ಬಗ್ಗೆ ಮಾತಾಡಿದರು.