Shashi Tarikere

Shashi Tarikere

ಯುವ ಬರಹಗಾರ ಶಶಿ  ಅವರು ಜನಿಸಿದ್ದು 1990 ಜನವರಿ 7ರಂದು. ಚಿಕ್ಕಮಗಳೂರು ಜಿಲ್ಲೆ ತರೀಕೆರೆಯವರಾದ ಶಶಿ ಪ್ರಸ್ತುತ ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಟೆಕ್ನೀಷಿಯನ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಥೆ, ಕವಿತೆ, ಕಿರುಚಿತ್ರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಇವರು ಬರೆದ ಕವಿತೆಗಳು ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ.  ಇವರ  ‘ಡುಮಿಂಗ’ ಕಥಾ ಸಂಕಲನ 2019 ರ ಸಾಲಿನ ಛಂದ ಪ್ರಶಸ್ತಿ ಒಲಿದು ಬಂದಿದೆ. ಟೊಟೊ ಫಂಡ್ಸ್‌ ದಿ ಆರ್ಟ್ (ಟಿ.ಎಫ್.ಎ) ಕೊಡಮಾಡುವ 2020ನೇ ಸಾಲಿನ ಟೊಟೊ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Books By Shashi Tarikere