ವೃತ್ತಿಯಲ್ಲಿ ಪತ್ರಕರ್ತರು ಆಗಿರುವ ಕವಿ ಸರಜೂ ಕಾಟ್ಕರ್ ಅವರು ಜನಿಸಿದ್ದು (1953 ಆಗಸ್ಟ್ 14ರಂದು) ಹುಬ್ಬಳ್ಳಿಯಲ್ಲಿ . ತಂದೆ ಹಣಮಂತರಾವ್, ತಾಯಿ ಗೌರಾಬಾಯಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ (ಕನ್ನಡ) ಪದವೀಧರರು.ಕರ್ನಾಟಕ ವಿ.ವಿ.ಯಿಂದ ‘ಕನ್ನಡ-ಮರಾಠಿ ದಲಿತ ಸಾಹಿತ್ಯ: ಒಂದು ಅಧ್ಯಯನ’ ವಿಷಯವಾಗಿ (1994) ಪಿಎಚ್ ಡಿ ಪಡೆದರು. ಸಂಯುಕ್ತ ಕರ್ನಾಟಕದಲ್ಲಿ ವರದಿಗಾರರಾಗಿ ವೃತ್ತಿ ಆರಂಭಿಸಿ, ನಂತರ ಇಂಡಿಯನ್ ಎಕ್ಸ್‌ಪ್ರೆಸ್ ಬಳಗದ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರು ಸೇರಿದಂತೆ ಸರ್ಕಾರದ ಹಲವಾರು ಅಕಾಡೆಮಿ, ಸಮಿತಿ ಹೀಗೆ ವಿವಿಧ ಜವಾಬ್ದಾರಿತ ಸ್ಥಾನಗಳನ್ನು ನಿರ್ವಹಿಸಿದ್ದಾರೆ.
ಕೃತಿಗಳು: ಬೆಂಕಿ-ನೀರು, ಹಸಿದ ನೆಲ, ಸೂರ್ಯ, ಮ್ಯಾನಿಫೆಸ್ಟೋ, ಏಕಾಂತದ ಮನುಷ್ಯ, ಪೆಗಾಸಸ್, ಗಜಲ್, ಹೈಕು, ಅವ್ವ, ನವಿಲೇ ನವಿಲು, ಗಾಂಧಿ ಟು. ಗೋದ್ರಾ, ಬೆಳ್ಳಿ ಸಾಲ್ಕನ್, ಉತ್ಖನನ, ಹೊಕ್ಕಳು ಮತ್ತು ಹೂವು, ಝೆನ್ ವೀರ ಹೈಕುಗಳು (ಕವನ ಸಂಕಲನಗಳು), ಮರಾಠಿ ದಲಿತ ಸಾಹಿತ್ಯ, ಅಟಲ್ ಬಿಹಾರಿ ವಾಜಪೇಯಿ ಕವಿತೆಗಳು, ಬಾಂಬ್ ವಿರೋಧಿ ಪಾಕಿಸ್ತಾನಿ ಕವಿತೆಗಳು, ತಸ್ಲಿಮಾ ನಜ್ರೀನ್ ಕವಿತೆಗಳು (ಕಾವ್ಯಗಳ ಅನುವಾದಿತ ಕೃತಿಗಳು), ದೇವರಾಯ, ಜುಲೈ 22, 1947, ಬಾಜೀರಾಯ ಮಸ್ತಾನಿ, ಸಾವಿತ್ರಿಬಾಯಿ ಫುಲೆ, ಗೌರೀಪುರ, ದಂಗೆ (ಕಾದಂಬರಿಗಳು) ಒಂದೂರಿನಲ್ಲಿ ಒಬ್ಬ ರಾಜನಿದ್ದ (ಅನುವಾದಿತ ಕಾದಂಬರಿ), ಅಂಬೆ (ನಾಟಕ), ಛಿನ್ನ, ದೇಹಭಾನ, ಮೂರನೆಯ ಮಂತ್ರ (ಅನುವಾದಿತ ನಾಟಕಗಳು), ಸಾದತ್ ಹುಸೇನ್ ಮಂಟೊ ಬಹಿಷ್ಕೃತ ಕಥೆಗಳು (ಅನುವಾದಿತ ಕಥಾ ಸಂಕಲನ), ಸಾಕ್ಷಿ, ವೃತ್ತಾಂತ, ಹೇಳಲಾಗದ ಕಥೆಗಳು (ವೃತ್ತಿಜೀವನ ಆಧಾರಿತ ಕಥೆಗಳು), ಕನ್ನಡ ಮರಾಠಿ ದಲಿತ ಸಾಹಿತ್ಯ (ಮಹಾಪ್ರಬಂಧ), ಮುಕ್ಕಾಂ ಪೋಸ್ಟ್ ಲಂಡನ್ ಪ್ರವಾಸ ಕಥನ ), ಕೋರೇಗಾಂವ್, ಬಸವ ಲಿಂಗಾಯತ, ಪತ್ರಿಕೆ ಮತ್ತು ಸಾಹಿತ್ಯ, ಕುವೆಂಪು ಕವಿಶೈಲ ಮತ್ತು ಷೇಕ್ಸ್ ಪಿಯರ್ ನ ಊರು, ಶಿವಾಜಿ ಮೂಲ ಕನ್ನಡ ನೆಲ, ಅಷಾಢಸ್ಯ ಪ್ರಥಮ ದಿವಸೇ, ಇತ್ಯಾದಿ ಇತ್ಯಾದಿ, ಸಿನೇಮಾ ಸಿನೇಮಾ, ಶರಣ ಸಂಸ್ಕೃತಿ, ಗುರುತಿನ ಮುಖಗಳು, ಕವಿಶೈಲ ಮತ್ತು ಇತರ ಲೇಖನಗಳು, ಶಬ್ದಪ್ರಮಾಣ, ಬಂಡಾಯ ಜಗದ್ಗುರು ಜೊತೆಗೆ ಮಾತುಕತೆ (ವೈಚಾರಿಕ ಕೃತಿಗಳು), ಕುಸುಮಾಗ್ರಜ, ಕರ್ನಾಟಕದ ಆತ್ಮಗೌರವ ಪಾಟೀಲ ಪುಟ್ಟಪ್ಪ, ನಿರ್ಭೀತ ಪತ್ರಕರ್ತ ಪಾಟೀಲ ಪುಟ್ಟಪ್ಪ, ಡಾ. ಪಾಟೀಲ ಪುಟ್ಟಪ್ಪ, ಪರಮೇಶ್ವರ ಬಳಿಗಾರ (ವ್ಯಕ್ತಿಚಿತ್ರ) , ವಾಲ್ಮೀಕಿ, ಅವ್ವ, ಚಂಪಾ ಲಿಮೆಯ ನೆನಪುಗಳು, ಮಧುಲಿಮೆಯ ಆತ್ಮಕಥೆ, ನಾನು ಹೀಗೆ ರೂಪುಗೊಂಡೆ (ಅನುವಾದಿತ ಆತ್ಮಕಥೆಗಳು), ಸುಪ್ರಸಿದ್ಧ ಭಾಷಣಗಳು, ನಾನು ಹಿಂದೂ ಆಗಿ ಹುಟ್ಟಿದ್ದೇನೆ; ಆದರೆ, ಹಿಂದೂ ಆಗಿ ಸಾಯಲಾರೆ, ಮುಟ್ಟಿಸಿಕೊಳ್ಳದವರನ್ನು ನಾವೇಕೆ ಮುಟ್ಟಬೇಕು?, ಮರಾಠಿ ಕಲಬುರ್ಗಿ (ಅನುವಾದಿತ ವೈಚಾರಿಕ ಕೃತಿಗಳು), ನಾನು ಪಾಟೀಲ ಪುಟ್ಟಪ್ಪ, ಭಾಗ-1, ನಾನು ಪಾಟೀಲ ಪುಟ್ಟಪ್ಪ ಭಾಗ-2 (ಆತ್ಮಕಥೆ ನಿರೂಪಣೆಯ ಕೃತಿಗಳು), ವಿಕ್ಷಿಪ್ತ, ಸ್ನೇಹ ಸಂಪದ, ಕನ್ನಡ ಬಂಡಾಯ ಸಾಹಿತ್ಯ, ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಕರ್ನಾಟಕ ಸಂಸ್ಕೃತಿ, ಬೆಳಗಾವಿ ಸಂಸ್ಕೃತಿ, ಸವ್ಯಸಾಚಿ, ಲಿಂಗಾಯತ ಸಂಸ್ಕೃತಿ, ಕಂಬಾರ ಕಾವ್ಯ ಕಾರಣ, ಮೇಘಮಿತ್ರ (ಸಂಪಾದಿತ ಕೃತಿಗಳು)