Sampaturu Vishwanath

Sampaturu Vishwanath

ಲೇಖಕ ಸಂಪಟೂರು ವಿಶ್ವನಾಥ್‌ ಅವರು ಜನಿಸಿದ್ದು 1938 ಫೆಬ್ರುವರಿ 28ರಂದು. ತಾಯಿ ನಾಗಮ್ಮ, ತಂದೆ ಎಸ್. ಹನುಮಂತರಾವ್, ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪದವಿ ಪಡೆದ ಇವರು ಸರ್ಕಾರಿ ವಿಜ್ಞಾನ ಕಾಲೇಜಿನಿಂದ ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಇವರು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ವಿಜ್ಞಾನ, ಸಾಹಿತ್ಯ, ಸಂಗೀತ, ನೃತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿದ್ದ ವಿಶ್ವನಾಥರು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇವರಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಎಂ.ಜಿ. ರಂಗನಾಥನ್‌ ಸ್ಮಾರಕ ಪ್ರಶಸ್ತಿ, ಸ್ನೇಹ – ಸೇತು ಬರಹಗಾರರ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಹಾಸ್ಯ ಬ್ರಹ್ಮ ಟ್ರಸ್ಟ್‌ ಗೌರವ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ವಿಭೂಷಣ ಪ್ರಶಸ್ತಿ, ಕಾವ್ಯ ಸಿಂಚನ ಬರಹಗಾರರ ಬಹುಮಾನ, ಕೆಂಪೇಗೌಡ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರಿವಿಸಲಾಗಿದೆ.
ವಿಶ್ವನಾಥರ ಪ್ರಮುಖ ಕೃತಿಗಳೆಂದರೆ ಮಕ್ಕಳ ಕಥಾ ಕೋಶ, ಜನಪ್ರಿಯ ಪುಟಾಣಿಗಳ ಚತುರೋಕ್ತಿಗಳು, ಧೀರ ಬಾಲಕ ಮತ್ತು ಇತರ ಕಥೆಗಳು, ವಿಜ್ಞಾನ ರಸ ಪ್ರಶ್ನೆಗಳು, ಜೈವಿಕ ತಂತ್ರಜ್ಞಾನ, ಸರಳ ವಿಜ್ಞಾನ ಪ್ರಯೋಗಗಳು, ಕಿರಿಯರ ವಿಜ್ಞಾನ ಕೋಶ, ರಸ ಪ್ರಶ್ನೆ, ಪದಕೋಶ, ಭಾರತದ ಪ್ರತಿಭಾನ್ವಿತರು, ಪ್ರಮುಖ ಜೀವ ವಿಜ್ಞಾನಿಗಳು, ಹಾಸ್ಯ ಚಟಾಕಿ, ಹಾಸ್ಯೋಕ್ತಿಗಳು, ಮಕ್ಕಳ ನಗೆ ನುಡಿ, ಸಾಲಿಗೊಂದು ಜೋಕ್ಸ್‌, ವಿಜ್ಞಾನ ರಸ ಪ್ರಶ್ನೆಗಳು, ಸಾಮಾನ್ಯ ಜ್ಞಾನ ಮತ್ತು ರಸಪ್ರಶ್ನೆ, ಬದುಕಿನ ಸರಳ ಸೂತ್ರಗಳು, ಸುಖ ಬಾಳಿನ ಸೂತ್ರಗಳು (ಭಾಗ ೧-೨), ಬಾಳಿಗೊಂದು ಬೆಳಕಿಂಡಿ ಮುಂತಾದವು.

Books By Sampaturu Vishwanath