Sadhguru Jaggi Vasudev

Sadhguru Jaggi Vasudev

ಜಗ್ಗಿ ವಾಸುದೇವ್‌ರವರು (ಸದ್ಗುರು) (ಜನನ ೩ ಸೆಪ್ಟೆಂಬರ್ ೧೯೫೭) ಒಬ್ಬ ಭಾರತೀಯ ಯೋಗಿ ಮತ್ತು ಅನುಭವಿ ಅಲ್ಲದೆ ಲೇಖಕರೂ ಆಗಿದ್ದಾರೆ. ಇವರು ಸ್ಥಾಪಿಸಿರುವ ’ಈಶ ಪ್ರತಿಷ್ಠಾನ’ ಸೇವಾಸಂಸ್ಥೆಯು ಲಾಭರಹಿತ ಹಾಗು ಜಾತ್ಯಾತೀತವಾಗಿದ್ದು, ಇದು ಭಾರತ, ಅಮೆರಿಕ, ಇಂಗ್ಲೆಂಡ್, ಲೆಬನಾನ್, ಸಿಂಗಪೂರ್, ಕೆನಡ, ಮಲೇಶಿಯ, ಉಗಾಂಡಾ, ಆಸ್ಟ್ರೇಲಿಯ ಮುಂತಾದ ದೇಶಗಳಲ್ಲಿ ಯೋಗಾಭ್ಯಾಸದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದೆ. ಈಶ ಪ್ರತಿಷ್ಠಾನವು ಅನೇಕ ಸಮಾಜೋದ್ಧಾರಕ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಂಡಿದೆ. ಇದರಿಂದಾಗಿ, ವಿಶ್ವಸಂಸ್ಥೆಯು ತನ್ನ ’ಎಕನಾಮಿ ಆಂಡ್ ಸೋಶಿಯಲ್ ಕೌನ್ಸಿಲ್’(ಆರ್ಥಿಕ ಮತ್ತು ಸಾಮಾಜಿಕ ಮಂಡಲಿ)ನಲ್ಲಿ ಈಶ ಪ್ರತಿಷ್ಠಾನಕ್ಕೆ ವಿಶೇಷ ಸಲಹೆಗಾರ ಸ್ಥಾನವನ್ನು ನೀಡಿದೆ.ಅವರು ಬರೆದಿರುವ ಪುಸ್ತಕಗಳು “ಆರೋಗ್ಯ”,”ಧರ್ಮ, ಆಧ್ಯಾತ್ಮಿಕತೆ ಮತ್ತು ನಂಬಿಕೆ”, “ಸಲಹೆ” ಮತ್ತು ಇತರೆ ಮುಂತಾದ ಅನೇಕ ವಿಭಾಗಗಳಲ್ಲಿ ದಿ ನ್ಯೂಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.
ಮೈಸೂರಿನಲ್ಲಿದ್ದ ಶ್ರೀಮತಿ ಸುಶೀಲ ಮತ್ತು ಡಾ. ವಾಸುದೇವ್ ಎಂಬ ತೆಲುಗು ದಂಪತಿಗೆ ನಾಲ್ವರು ಮಕ್ಕಳು – ಇಬ್ಬರು ಪುತ್ರಿಯರು ಮತ್ತು ಇಬ್ಬರು ಪುತ್ರರು. ಕಿರಿಯ ಮಗ ಜಗದೀಶ್ ಹುಟ್ಟಿದ್ದು 1957 ರ ಸೆಪ್ಟೆಂಬರ್ 3ರಂದು. ಮನೆಗೆ ಬಂದ ಗೊರವನೊಬ್ಬ ಹೇಳಿದಂತೆ, ಮಗುವಿನ ಭವಿಷ್ಯ ಅತ್ಯುತ್ತಮವಾಗಿದೆಯೆಂದು ಕೇಳಿ, ’ಜಗದೀಶ್’- ಅರ್ಥಾತ್ ಜಗತ್ತಿನ ಒಡೆಯ, ಎಂಬ ಹೆಸರಿಟ್ಟರು. ಜಗದೀಶನ ತಂದೆಯವರು ರೈಲ್ವೆ ಆಸ್ಪತ್ರೆಯಲ್ಲಿ ಕಣ್ಣಿನ ವೈದ್ಯರಾಗಿದ್ದುದರಿಂದ ಆಗಾಗ್ಗೆ ವರ್ಗವಾಗಿ ಬೇರೆ ಊರುಗಳಿಗೆ ಸಂಸಾರಸಮೇತ ಹೋಗ ಬೇಕಾಗುತ್ತಿತ್ತು.
’ಜಗ್ಗಿ’ (ಜಗದೀಶನ ಪ್ರೀತಿಯ ಹೆಸರು)ಯು, ಚಿಕ್ಕಂದಿನಿಂದಲೇ ಪ್ರಕೃತಿಪ್ರೇಮಿಯಾಗಿ ಮೈಸೂರಿನ ಸುತ್ತಮುತ್ತಲಿನ ಕಾಡುಮೇಡುಗಳಲ್ಲಿ ಅಲೆದಾಡುತ್ತಿದ್ದರು. ಕೆಲವು ವೇಳೆ ಈ ಅವಧಿ ಹಲವು ದಿನಗಳವರೆಗೂ ಹೋದದ್ದುಂಟು. ೧೧ನೇ ವರ್ಷದಲ್ಲಿ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳ ಪರಿಚಯವಾಗಿ, ಅವರಲ್ಲಿ ಪ್ರಾರಂಭಿಕ ಯೋಗಾಸನಗಳನ್ನು ಕಲಿತು ದಿನವೂ ಅಭ್ಯಾಸ ಮಾಡುತ್ತಿದ್ದರು. ಸದ್ಗುರುಗಳೇ ಹೇಳಿರುವಂತೆ ಒಂದು ದಿನವೂ ಬಿಡದಂತೆ ಮಾಡುತ್ತಿದ್ದ ಸರಳ ಯೋಗವು ಕಾಲಾನಂತರದಲ್ಲಿ ಮತ್ತೂ ಆಳವಾದ ಆಧ್ಯಾತ್ಮಿಕ ಅನುಭವಕ್ಕೆ ದಾರಿ ಮಾಡಿಕೊಟ್ಟಿತು.

Books By Sadhguru Jaggi Vasudev