ಕರ್ನಾಟಕ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದ ಶ್ರೀ ಸದಾಶಿವ ಶಿವದೇವ ಒಡೆಯರ ಅವರು ಮಸ್ತಕದ ಲೇಖಕರು. ಮುಂಬೈ ವಿಶ್ವವಿದ್ಯಾನಿಲಯದಿಂದ ಅಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಇವರಿಗೆ ಅಮೆರಿಕಾ ಸರಕಾರವು ಅಲ್ಲಿನ ವಿಶ್ವವಿದ್ಯಾನಿಲಯಗಳಿಗೆ ಭೇಟಿ ನೀಡಲು 1963ರಲ್ಲಿ ಆಮಂತ್ರಿಸಿತು. ವಿಶ್ವವಿದ್ಯಾನಿಲಯ ಆಡಳಿತದ ಬಗ್ಗೆ ಲಂಡನ್ನಿನಲ್ಲಿ ಏರ್ಪಡಿಸಿದ್ದ ಒಂದು ಗೋಷ್ಠಿಯಲ್ಲಿ ಇವರು ಭಾಗವಹಿಸಿದ್ದರು. ಆಧುನಿಕ ಕನ್ನಡ ಸಾಹಿತ್ಯದ ಬಗ್ಗೆ ಲೇಖಕರು ವ್ಯಾಪಕವಾದ ಅಧ್ಯಯನ ಕೈಗೊಂಡಿದ್ದಾರೆ.