Roopa Gururaj

Roopa Gururaj

ರೂಪಾ ಗುರುರಾಜ್ ಅವರು ಸಂವಹನ-ಲೇಖನ ಮತ್ತಿತರ ಸೃಜನಶೀಲ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ರೇಡಿಯೊ ಮತ್ತು ಸಂವಹನ, ಸ್ಕ್ರಿಪ್ಟ್‌ ಮತ್ತು ಸೃಜನಾತ್ಮಕ ಬರಹ, ಕಂಠದಾನ, ಕಾರ್ಯಕ್ರಮ ನಿರೂಪಣೆ ಮೊದಲಾದ ಹತ್ತು ಹಲವು ರಂಗಗಳಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಡಿಡಿ ಚಂದನ ಮತ್ತು ಎಫ್‌ಎಂ ರೇನ್‌ಬೋ, ನಮ್ ರೇಡಿಯೋ ಜತೆ ಹಲವಾರು ವರ್ಷ ಕೆಲಸ ಮಾಡಿದ್ದಾರೆ. ಸಾಕಷ್ಟು ರೇಡಿಯೋ ಹಾಗೂ ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಅವರ ಕಂಠಸಿರಿಯ ಸ್ಪರ್ಶವಿದೆ. ನಾನಾ ರೀತಿಯ 500ಕ್ಕೂ ಹೆಚ್ಚಿನ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಕೆಲವು ಕಿರುಚಿತ್ರಗಳಲ್ಲಿಯೂ ನಟಿಸಿದ್ದಾರೆ. ಉಡುಪು ಮತ್ತು ಆಭರಣಗಳ ಬ್ರಾಂಡ್‌ಗಳಿಗಾಗಿ ಮಾಡೆಲಿಂಗ್ ಮಾಡಿದ ಅನುಭವವೂ ಇವರಿಗಿದೆ.

Books By Roopa Gururaj