Ravi J Bhajantri

Ravi J Bhajantri

ಮೂಲತಃ ಸವದತ್ತಿಯವರಾದ ಬರಹಗಾರ ರವಿ ಜೆ. ಭಜಂತ್ರಿ ಅವರು ಜನಿಸಿದ್ದು 1971 ಆಗಸ್ಟ್‌ 31ರಂದು. ಪ್ರಸ್ತುತ ಸರಕಾರಿ ಶಿಕ್ಷಕರ ಶಿಕ್ಷಣ ಕಾಲೇಜು, ಬೆಳಗಾವಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಂಗ ನಟ-ನಿರ್ದೇಶಕರಾಗಿ ನಗೆಹನಿ-ಅಣಕುಹಾಡುಗಳ ರಚನೆಕಾರರಾಗಿ, ಹರಟೆ ಮಲ್ಲರಾಗಿ ಮತ್ತು ನಗೆ-ಮಾತುಗಾರರಾಗಿ ಪರಿಚಿತರಾಗಿರುವ ಇವರು ಹಾಸ್ಯಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಇವರ ಪ್ರಮುಖ ಕೃತಿಯೆಂದರೆ ಪ್ರಾಣೇಶ್‌ ಪಂಚ್‌ ಪಕ್ವಾನ್ನ.

Books By Ravi J Bhajantri