ರವಿ ಅವರು ಗದಗ ತಾಲೂಕಿನ ನೀಲಗುಂದ ಗ್ರಾಮದ ಕೃಷಿ ಕುಟುಂಬದಲ್ಲಿ ೨೩ ಜುಲೈ ೧೯೮೫ ರಂದು ಧ್ಯಾಮಪ್ಪ ಚನ್ನಣ್ಣನವರ್ ಹಾಗೂ ರತ್ನಮ್ಮ ದಂಪತಿಗೆ ಜನಿಸಿದರು. ಗದಗದ ನೀಲಗುಂದ ಸರ್ಕಾರಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣ,ಗದಗದಲ್ಲಿ ಪದವಿ ಪೂರ್ವ ವಿದ್ಯಾಭ್ಯಾಸ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು.ತಮ್ಮ ಶೈಕ್ಷಣಿಕ ವೆಚ್ಚಗಳು ಹಾಗೂ ಕೌಟುಂಬಿಕ ಜವಾಬ್ದಾರಿಗಳನ್ನು ನಿಭಾಯಸಲು ಅವರು ಅರೆಕಾಲಿಕ ಕೆಲಸ ಮಾಡುತ್ತಿದ್ದರು.. .ಮೇ ೨೦೦೭ ರಲ್ಲಿ, ಐಎಎಸ್ ಪರೀಕ್ಷೆಯ ತರಭೇತಿಯನ್ನು ಅವರು ಹೈದರಾಬಾದ್ ನಲ್ಲಿ ಪಡೆದರು..೨೦೦೮ರಲ್ಲಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ)ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ೭೦೩ ನೇ ಸ್ಥಾನ ಪಡೆದರು.ಇವರು ತ್ರಿವೇಣಿಯವರನ್ನು ವಿವಾಹವಾಗಿದ್ದಾರೆ.