Rangaswamy Mookanahalli

Rangaswamy Mookanahalli

ರಂಗಸ್ವಾಮಿ ಮೂಕನಹಳ್ಳಿ ಅವರು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಇರುವ ಗ್ರಾಹಕರಿಗೆ ಹಣ ಹೂಡಿಕೆಯ ತಜ್ಞ. ಸಲಹೆಗಾರರಾಗಿ ವೃತ್ತಿ ನಿರತರು. ಹಲವಾರು ಉದ್ಯಮಗಳಲ್ಲಿ ಸಹ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕನ್ನಡದ ಹಲವು ಪ್ರಮುಖ ಪತ್ರಿಕೆ ನಿಯತಕಾಲಿಕೆಗಳಲ್ಲಿ ಹಣಕಾಸು ವಿಷಯಗಳ ಬಗ್ಗೆ ತ ಅಂಕಣಗಳನ್ನು ನಿಯಮಿತವಾಗಿ ಬರೆಯುತ್ತ ಬಂದಿದ್ದಾರೆ. ಕನ್ನಡ ಮತ್ತು ಸ್ಪಾನಿಷ್ ಭಾಷೆಯ ಸಮಾನಾಂತರ ಗಾದೆಗಳನ್ನು ಗುರುತಿಸಿ ಕೃತಿಯನ್ನು ರಚಿಸಿದ್ದು, ಇದು ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿದೆ. ಹಣಕಾಸಿಗೆ ಸಂಬಂಧಿಸಿದ ಮೂರು ಅಂಕಣ ಗುಚ್ಛಗಳ ಕೃತಿಗಳು ಸಹ ಪ್ರಕಟಗೊಂಡಿವೆ. ‘ಬದುಕಿಗೊಂದು ಆಶಾಭಾವ, ವಿತ್ತ ಜಗತ್ತು ತಿಳಿಯಬೇಕಾದ ವಿಷಯ ಹಲವು ಹತ್ತು’ ಅವರ ಪ್ರಮುಖ ಕೃತಿಗಳು.

Books By Rangaswamy Mookanahalli