Radhakrishna Kalchar

Radhakrishna Kalchar

ರಾಧಾಕೃಷ್ಣ ಕಲ್ಚಾರ್ ಅವರು ಸುಳ್ಯ ತಾಲೂಕಿನ ಪಂಜ ಗ್ರಾಮದ ಕಲ್ಚಾರ್ ಎಂಬಲ್ಲಿ ಜನಿಸಿದರು. ತಂದೆ ಮಾಣಿಪ್ಪಾಡಿ ಕೇಶವ ಭಟ್ಟ, ತಾಯಿ ಕನಕಲಕ್ಷ್ಮಿ. ಪ್ರಸ್ತುತ ವಿಟ್ಲದಲ್ಲಿ ವಾಸವಾಗಿದ್ದಾರೆ. ನಾಡಿನ ಸುಪ್ರಸಿದ್ಧ ಅರ್ಥಧಾರಿ ಕಲಾವಿದರಾಗಿರುವ ರಾಧಾಕೃಷ್ಣ ಕಲ್ಚಾರರು ಉಪನ್ಯಾಸಕ, ಅಂಕಣಕಾರ, ಸಾಹಿತಿ,ವಿಮರ್ಶಕ ,ಭಾಷಣಕಾರ,ಹೀಗೆ ಹತ್ತು ಹಲವು ರಂಗಗಳಲ್ಲಿ ತೊಡಗಿಸಿಕೊಂಡ ಬಿಡುವಿಲ್ಲದ ಸಾಧಕ. ಕೂಡುಮನೆ  (ಕಾದಂಬರಿ), ಅವರವರ ದಾರಿ (ಕಥಾಸಂಕಲನ) , ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ – ಇವರ ಕೃತಿಗಳು.

ಜೊತೆಗೆ ತರಂಗ,ಉತ್ಥಾನಗಳಲ್ಲಿ ಅಂಕಣಕಾರಾಗಿದ್ದಾರೆ. ಸದ್ಯ ಹೊಸದಿಗಂತ ಪತ್ರಿಕೆಯಲ್ಲಿ ಆ ಲೋಚನ ಹಾಗೂ ತುಷಾರ ಪತ್ರಿಕೆಯಲ್ಲಿ ಉಲಿಯ ಉಯ್ಯಾಲೆ ಅಂಕಣದ ಲೇಖರಾಗಿದ್ದಾರೆ. ಸಿರಿಬಾಗಿಲು ಪ್ರತಿಷ್ಠಾನದ “ಅರ್ಥಾಂತರಂಗ ” ಸರಣಿ ಪ್ರಾತ್ಯಕ್ಷಿಕೆಗಳ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಅವರು ಸದ್ಯ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದಾರೆ.

Books By Radhakrishna Kalchar