Prashant Adur

Prashant Adur

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ ಹುಬ್ಬಳ್ಳಿ ಒಳಗ swastik winding wires pvt ltd ಅನ್ನೋ ಒಂದ ಪ್ರೈವೇಟ ಕಂಪನಿ ಒಳಗ ಸಿ.ಇ.ಒ. ಅಂತ ೨೦ ವರ್ಷದಿಂದ ಕೆಲಸಾ. ಆವಾಗ – ಇವಾಗ ಬರಿಯೋದು, ತಿಂಗಳಿಗೆ ಒಂದೆರಡ ಸಲಾ ವಿಜಯವಾಣಿ ಒಳಗ ’ಗಿರಮಿಟ್’ ಅಂಕಣ, ತಲ್ಯಾಗ ತಿಳದಾಗ ಒಮ್ಮೆ ಪೇಂಟಿಂಗೂ, ಫೋಟೋಗ್ರಾಫಿ… ಉಳದದ್ದ ಟೈಮನಾಗ ಊರ ಹಿರೇತನ ಅಂದರ ಸಮಾಜ ಸೇವಾ. ಸೋಸಿಯಲ್ ಮೀಡಿಯಾದ್ದ ಒಂದ ಸ್ವಲ್ಪ ಹುಚ್ಚ ಜಾಸ್ತಿ ಹಿಂಗಾಗಿ ಫೇಸಬುಕ್ ನನ್ನ ಅಡ್ಡಾ ಇದ್ದಂಗ.
ಬರಿಲಿಕ್ಕೆ ಶುರು ಮಾಡಿದ್ದ ಕೆಂಡಸಂಪಿಗೆ ಬ್ಲಾಗ್ ನಿಂದ, ಮುಂದ ವಿಜಯ ಕರ್ನಾಟಕದೊಳಗ ’ಹಾಳ ಹರಟೆ’ ಅಂಕಣ ಶುರು ಆತು..ಮುಂದ ನನ್ನ ಒಂದನೇ ಪುಸ್ತಕ ’ಕುಟ್ಟವಲಕ್ಕಿ’ ಛಂದ ಪುಸ್ತಕದವರು ಪ್ರಕಟಿಸಿದರು. ಆಮ್ಯಾಲೆ, ಅವಧಿ, ಕನ್ನಡ ಓನ್ ಇಂಡಿಯಾ, ಅಪರಂಜಿ ಹಿಂಗ ಟೈಮ ಸಿಕ್ಕಾಗೇಲ್ಲಾ ಬರಿತಿದ್ದೆ, ಮುಂದ ’ಗೊಜ್ಜವಲಕ್ಕಿ’ ಪುಸ್ತಕ ಪ್ರಕಟ ಆತು. ಸದ್ಯೇಕ ಅವ ಎರಡ ನಾ ಬರದ ಪುಸ್ತಕ. ಹಂಗ ಒಟ್ಟಾರೇ ನಾ ಏನಿಲ್ಲಾಂದರ ಒಂದ ಎರಡನೂರಾ ಐವತ್ತ ಲೇಖನ ಬರದಿರಬಹುದು, ಆವೇಲ್ಲಾ ಲೇಖನ ಈ ಬ್ಲಾಗ್ ಒಳಗ ಅವ.

Books By Prashant Adur