Prakash Kambathalli

Prakash Kambathalli

ಅಂಕಿತ ಪುಸ್ತಕ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಮೂಲತಃ ದಾವಣಗೆರೆಯವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಅವರಿಗೆ ರಂಗಭೂಮಿಯ ಕಡೆ ಒಲವು. ನಾಟಕಶಾಸ್ತ್ರದಲ್ಲಿ ಬಿ. ಎ ಹಾಗೂ ಕನ್ನಡದಲ್ಲಿ ಎಂ. ಎ ಪದವೀಧರರು. ಕಥೆಗಾರರು. ಅನುವಾದಕರು. ವಿವಿಧ ಸಂಸ್ಥೆಗಳಲ್ಲಿ ಸಂಪಾದಕರಾಗಿ ದುಡಿದಿದ್ದಾರೆ. 1995ರಲ್ಲಿ ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಹೊಸ ಕಥೆಗಾರರಿಗೆ ಮತ್ತು ಪ್ರೇಕ್ಷಕರಿಗೆ ಪ್ರೋತ್ಸಾಹಿಸುತ್ತಿದ್ದಾರೆ. ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾಗಿದ್ದರು. ಕೆಲ ಕಾಲ ಶಿಕ್ಷಕರಾಗಿಯೂ ಕೆಲಸ ಮಾಡಿದ್ದಾರೆ.
ಕೃತಿಗಳು ; ಅನ್ವೇಷಕರು ಮತ್ತು ಇತರ ನಾಟಕಗಳು, ಕಂಪ್ಯೂಟರ್ ಸೇವಕ ಮತ್ತು ಇತರ ನಾಟಕಗಳು, ಮಕ್ಕಳಿಗಾಗಿ ಮತ್ತೆ ಹೇಳಿದ ನಸಿರುದ್ದೀನನ ಕತೆಗಳು,
ಪ್ರಶಸ್ತಿ-ಪುರಸ್ಕಾರಗಳು: ವಿಚಾರ ಸಂಸ್ಥೆಯ 2019ನೇ ಸಾಲಿನ ‘ಪುಸ್ತಕ ಸಂಸ್ಕೃತಿ, ರಾಜ್ಯ ಮಟ್ಟದ ಕಣ್ವ ವರ್ಷದ ಪ್ರಕಾಶಕ ಪ್ರಶಸ್ತಿ ಲಭಿಸಿದೆ.

Books By Prakash Kambathalli