ಕೃಷಿಕ, ಸಂಶೋಧಕ, ಕಾದಂಬರಿಕಾರ ಪ್ರದೀಪ್ ಕೆಂಜಿಗೆ ಲೇಖಕರೂ ಹೌದು. ಜನನ 1959ರ ಜನೆವರಿ 23 ರಂದು. ಲೇಖಕ ಪೂರ್ಣಚಂದ್ರ ತೇಜಸ್ವಿ ಅವರೊಂದಿಗೆ ಸೇರಿ ಮಿಲೆನಿಯಮ್ ಸರಣಿ ಮತ್ತು ಪ್ಯಾಪಿಲಾನ್ ಸರಣಿ ಪುಸ್ತಕಗಳು ಬರೆದು/ಅನುವಾದಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ‘ಕೆಂಜಿಗೆ’ ಇವರ ಊರು. ಅಮೇರಿಕಾದ ಪ್ರಸಿದ್ಧ ಕರಿಯರ ವಿಶ್ವವಿದ್ಯಾಲಯ ಟಸ್ಕ್ಗೀಯಲ್ಲಿ ಪರಿಸರ ವಿಜ್ಞಾನ ಅಭ್ಯಸಿಸಿ, ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅರಿಜೋನಾದ ಮರಳುಗಾಡಿನಲ್ಲಿ ಬುಡಕಟ್ಟು ಜನಾಂಗದವರೊಡನೆ ಕೆಲಸ ಮಾಡಿದ ಅನುಭವವಿದೆ. ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆ ಹಾಗೂ ಅದರ ಮೇಲೆ ಕ್ರಿಮಿ ನಾಶಕಗಳ ದುಷ್ಪರಿಣಾಮಗಳ ಅಧ್ಯಯನದಲ್ಲಿ ಪಿ ಎಚ್ ಡಿ. ಪಡೆದಿದ್ದಾರೆ. ವಿಸ್ಮಯ’ ಮಾಲಿಕೆಗಾಗಿ ಪೂಚಂತೇ ಅವರೊಂದಿಗೆ ಜಂಟಿಯಾಗಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.