Paranjyothi

Paranjyothi

ಪತ್ರಕರ್ತ, ಕಾದಂಬರಿಕಾರ, ಸಾಮಾಜಿಕ ಅಧ್ಯಯನಕಾರರಾಗಿರುವ ಪರಂಜ್ಯೋತಿ ಎಂತಲೇ ಪರಿಚಿತರಾಗಿರುವ ಕೆ.ಪಿ. ಸ್ವಾಮಿ ಅವರು ಜನಿಸಿದ್ದು 1936 ಜೂನ್ 10ರಂದು ಮಂಡ್ಯ ಜಿಲ್ಲಯ ಮಳವಳ್ಳಿಯಲ್ಲಿ. ತಂದೆ ರವಳ ಮೇಸ್ತ್ರಿ, ತಾಯಿ ಚೌಡಮ್ಮ. ಉದ್ಯೋಗ ಹರಸಿ ತಮಿಳುನಾಡಿನ ಕಡೆಗೆ ವಲಸೆಬಂದ ಇವರ ಕುಟುಂಬ ನೆಲೆಸಿದ್ದು ನೀಲಗಿರಿಯಲ್ಲಿ. ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಮಂಡ್ಯದಲ್ಲಿ ಪ್ರೌಢ ಶಿಕ್ಷಣ ಪಡೆದರು. ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ಇವರು ಇಂದ್ರ ಧನುಸ್, ಪ್ರಪಂಚ, ಸೋವಿಯೆಟ್ ಲ್ಯಾಂಡ್ ಮುಂತಾದ ಪತ್ರಿಕೆಗಳಲ್ಲಿ ಉಪ ಸಂಪಾದಕರಾಗಿ, ಅನುವಾದಕರಾಗಿ ಕಾರ್ಯ ನಿರ್ವಹಿಸಿದ್ದರು.
ಪರಂಜ್ಯೋತಿ ಅವರ ಪ್ರಮುಖ ಕೃತಿಗಳೆಂದರೆ ಒಲವು ಚೆಲುವಲ್ಲಿ, ಬದುಕು, ಕೊಂಪೆ (ಕಾದಂಬರಿ), ಕೆಂದಾವರೆ, ಕತ್ತಲಲ್ಲಿ ಹುಟ್ಟಿತೊಂದು ಕತೆ, ಶೂದ್ರದೀಕ್ಷೆ, ಕಳೆದು ಹೋದದ್ದು, ಆಸರೆ, ಅವತಾರ, ಕಣಿವೆ (ಕಥಾ ಸಂಕಲನ), ನದಿ ನೀರಿನ ಸ್ಪೆಷಲ್, ಚಿನ್ನದ ಬೆನ್ನೇರಿ, ಬೆಟ್ಟ ಸಾಲಿನ ಮೋಡಿ (ಲೇಖನ ಸಂಗ್ರಹ) ಇನ್ನು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇವರು 2019 ಜುಲೈ 4ರಂದು ನಿಧನರಾದರು.

Books By Paranjyothi