ಪರಮಹಂಸ ಯೋಗಾನಂದ, ಮೂಲನಾಮ ಮುಕುಂದ ಲಾಲ್ ಘೋಷ್, ತಮ್ಮ ಪುಸ್ತಕ ಯೋಗಿಯ ಆತ್ಮಕಥೆಯ ಮೂಲಕ ಧ್ಯಾನ ಹಾಗು ಕ್ರಿಯಾಯೋಗದ ಬೋಧನೆಗಳಿಗೆ ಲಕ್ಷಾಂತರ ಪಾಶ್ಚಿಮಾತ್ಯರನ್ನು ಪರಿಚಯಿಸಿದ ಒಬ್ಬ ಭಾರತೀಯ ಯೋಗಿ ಹಾಗು ಗುರುಗಳಾಗಿದ್ದರು.
1946 ರಲ್ಲಿ, ಯೋಗಾನಂದ ಅವರ ಜೀವನ ಕಥೆಯನ್ನು ಪ್ರಕಟಿಸಿದರು, ಅದೇ ‘ಆಟೋಬಯಾಗ್ರಫಿ ಆಫ್ ಎ ಯೋಗಿ’. ಇದು ನಂತರ 45 ಭಾಷೆಗಳಲ್ಲಿ ಅನುವಾದಗೊಂಡಿದೆ. 1999 ರಲ್ಲಿ, ಫಿಲಿಪ್ ಝಲೆಸ್ಕಿ ಮತ್ತು ಹಾರ್ಪರ್ಕಾಲಿನ್ಸ್ ಪ್ರಕಾಶಕರು ನಡೆಸಿದ ಆಧ್ಯಾತ್ಮಿಕ ಲೇಖಕರ ಸಮಿತಿಯಿಂದ “20 ನೇ ಶತಮಾನದ 100 ಅತ್ಯಂತ ಮಹತ್ವದ ಆಧ್ಯಾತ್ಮಿಕ ಪುಸ್ತಕ” ಗಳಲ್ಲಿ ಇದು ಒಂದಾಗಿತ್ತು. ಯೋಗಿಗಳ ಪುಸ್ತಕಗಳಲ್ಲಿ ‘ಯೋಗಿಯ ಆತ್ಮಚರಿತ್ರೆ’ ಹೆಚ್ಚು ಜನಪ್ರಿಯವಾಗಿದೆ.
ಭಾರತವು 1977 ರಲ್ಲಿ ಪರಮಹಂಸ ಯಾಗಾನಂದರ ಗೌರವಾರ್ಥವಾಗಿ ಒಂದು ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಿತು.