ನುಗ್ಗೇಹಳ್ಳಿ ಪಂಕಜ ( ಜನನ : ಜೂನ್ ೧೯೨೯, ೨) ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬರೆಯುವ ಭಾರತೀಯ ಬರಹಗಾರ್ತಿ. ಪಂಕಜ ಅವರ ತಾಯಿ ಶಾಂತಮ್ಮ ಮತ್ತು ತಂದೆ ಎಸ್.ಪಿ.ರಾಘವಾಚಾರ್ ; ಪತಿ ಎನ್.ತಿರುಮಲೆ. ಅವರು ಕನ್ನಡ ಭಾಷೆಯ ಪ್ರಮುಖ ಲೇಖಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅವರ ಕೃತಿಗಳಲ್ಲಿ ಕಾದಂಬರಿಗಳು, ಸಣ್ಣ ಕಥೆಗಳು, ಹಾಗೂ ನಾಟಕಗಳು ಸೇರಿವೆ. ಅವರ ಶ್ರೇಷ್ಠ ಇಂಗ್ಲೀಷ್ ಕವನಗಳಿಗೆ ಇಂಟರ್‌ನ್ಯಾಷನಲ್ ಅಕಾಡೆಮಿಯ “ವಿಶ್ವ ಕವನ ಪ್ರಶಸ್ತಿ”ಯನ್ನು ನೀಡಲಾಯಿತು.
“ಬಳ್ಳಿ ಮೊಗ್ಗು” ಕೃತಿಗೆ ೧೯೭೮ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಉತ್ತಮ ಮಹಿಳಾ ಪುಸ್ತಕ ಬಹುಮಾನ ದೊರೆತಿದೆ.