Narendra Rai Derla

Narendra Rai Derla

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಡಾ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಡಾ. ನರೇಂದ್ರ ರೈ ದೇರ್ಲ ಅವರು ಪತ್ರಕರ್ತರೂ ಹೌದು. ಹಾಗೆಯೇ ಕವಿಗಳೂ ಕೂಡ. ‘ತೊದಲು’ ಕವನ ಸಂಕಲನದ ನಂತರ ಗದ್ಯ ಬರವಣಿಗೆ ಮುಂದುವರಿಸಿದರು. ಆದರೆ, ಪದ್ಯದ ಗುಣ ಅವರ ಗದ್ಯಕ್ಕಿದೆ. ಅವರಿಗೆ ಸಾವಯವ ಕೃಷಿಯಲ್ಲಿ ವಿಶೇಷ ಆಸಕ್ತಿ . ಹಾಗಯೇ ಪರಿಸರದ ಬಗ್ಗೆ ಗಾಢ ಅನುರಕ್ತಿ. ತೇಜಸ್ವಿಯೊಳಗಿನ ಕಲಾವಿದ’ನನ್ನು ಕಂಡರಿಸಿದ ನರೇಮದ್ರ ಅವರು ‘ನಮ್ಮೆಲ್ಲರ ತೇಜಸ್ವಿ’ಯ ಅನಾವರಣಗೊಳಿಸಿದ್ದಾರೆ. ’ವಿಶುಕುಮಾರ್ ಬದುಕು ಬರೆಹ’; ‘ಹೊನ್ನಯ ಶೆಟ್ಟಿ ಬದುಕು ಬರೆಹ’; ‘ಡಾ. ಮೋಹನ ಆಳ್ವ ಬದುಕು ಬರೆಹ’ ಅವರ ಕೆಲವು ಕೃತಿಗಳು. ‘ಕನ್ನಡದಲ್ಲಿ ಬೇಟೆ ಸಾಹಿತ್ಯ’; “ಬೇಟೆ-ಪ್ರಭುತ್ವದಿಂದ ಪ್ರಜಾಪ್ರಭುತ್ವದೆಡೆಗೆ’, ‘ಹಸಿ ಕೃಷಿಯ ನಿಟ್ಟುಸಿರುಗಳು’; ‘ಕೃಷಿ ದೇಸೀ ಚಿಂತನೆ’ ಹಾಗೂ ‘ಸಾವಯವ ಕೃಷಿ’ ಪುಸ್ತಕಗಳು ಅವರಿಗೆ ಹೆಸರು ತಂದಿವೆ.

Books By Narendra Rai Derla