Nadoja H L Nage Gowda

Nadoja H L Nage Gowda

ಎಚ್.ಎಲ್. ನಾಗೇಗೌಡ (ಫೆಬ್ರವರಿ ೧೧,೧೯೧೫- ಸೆಪ್ಟೆಂಬರ್೨೨,೨೦೦೫) ಕರ್ನಾಟಕದ ಮಂಡ್ಯ ಜಿಲ್ಲೆಯ ಹೆರಗನಹಳ್ಳಿಯಲ್ಲಿ ಜನಿಸಿದರು.ಇವರು ೧೯೬೦ ರಲ್ಲಿ ಭಾರತೀಯ ಆಡಳಿತಾತ್ಮಕ ಸೇವಾ(ಐ.ಎ.ಎಸ್) ಅಧಿಕಾರಿಯಾದರು. ಇವರು ಕನ್ನಡದಲ್ಲಿ ಕಾದಂಬರಿಗಳು, ಕವನ, ಸಣ್ಣ ಕಥೆಗಳು, ಪ್ರಬಂಧಗಳು ಮತ್ತು ಪ್ರವಾಸಕಥನಗಳನ್ನು ಬರೆದಿದ್ದಾರೆ. ೧೯೭೯ರಲ್ಲಿ ,ನಾಗೇಗೌಡರು ಕರ್ನಾಟಕದ ಸಾಂಪ್ರದಾಯಿಕ ಜಾನಪದ ಕಲೆಗಳ ಅಧ್ಯಯನ ಮತ್ತು ಪ್ರಸರಣ ಮೀಸಲಾದ ಕರ್ನಾಟಕ ಜಾನಪದ ಪರಿಷತ್ತನ್ನು ಸ್ತಾಪಿಸಿದರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ , ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ ಮತ್ತು ಸಂದೇಶ ಪ್ರಶಸ್ತಿಗಳು ದೊರಕಿವೆ.
ಜಾನಪದ ತಜ್ಞ, ಸಾಹಿತಿ, ಆಡಳಿತಗಾರರೆನಿಸಿದ್ದ ನಾಗೇಗೌಡರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನಹಳ್ಳಿಯ ‘ದೊಡ್ಡಮನೆ’ ಕುಟುಂಬದಲ್ಲಿ ೧೯೧೫ರ ಫೆಬ್ರವರಿ ೧೧ರಂದು. ತಂದೆ ಲಿಂಗೇಗೌಡ, ತಾಯಿ ಹುಚ್ಚಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಅಳೀಸಂದ್ರ ಹಾಗೂ ನಾಗತಿಹಳ್ಳಿಯಲ್ಲಿ. ಮಾಧ್ಯಮಿಕ ಮತ್ತು ಪ್ರೌಢಶಾಲೆ ಚನ್ನರಾಯಪಟ್ಟಣದಲ್ಲಿ. ಬೆಂಗಳೂರಿನಲ್ಲಿ ಇಂಟರ್ ಮೀಡಿಯೆಟ್‌, ಮೈಸೂರಿನಲ್ಲಿ ಬಿ.ಎಸ್ಸಿ, ಮತ್ತು ಪೂನದಲ್ಲಿ ಪಡೆದ ಎಲ್‌.ಎಲ್‌.ಬಿ ಪದವಿಗಳು. ಮುನ್ಸೀಫ್‌ ಕೋರ್ಟಿನಲ್ಲಿ ಹೆಡ್‌ಮುನ್ಷಿಯಾಗಿ ವೃತ್ತಿ ಆರಂಭಿಸಿದ್ದು ನರಸಿಂಹರಾಜ ಪುರದಲ್ಲಿ. ಮೈಸೂರು ಸಿವಿಲ್‌ ಸರ್ವೀಸ್‌ನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರೆವಿನ್ಯೂ ಇಲಾಖೆಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಆಯ್ಕೆ. ರಾಜ್ಯದ ನಾನಾ ಕಡೆ ವಹಿಸಿಕೊಂಡ ಜವಾಬ್ದಾರಿಗಳು. ೧೯೬೦ರಲ್ಲಿ ಐ.ಎ.ಎಸ್‌. ಅಧಿಕಾರಿಯಾಗಿ ಆಯ್ಕೆಯಾಗಿ ಶಿವಮೊಗ್ಗ, ಚಿಕ್ಕಮಗಳೂರು, ಿಣ ಕನ್ನಡ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ, ೧೯೬೯ರಲ್ಲಿ ಆಯುಕ್ತರಾಗಿ ನೇಮಕಗೊಂಡರು. ೧೯೭೩ರಲ್ಲಿ ರಾಜ್ಯದ ಲೋಕಸೇವಾ ಆಯೋಗದ ಸದಸ್ಯರಾಗಿ ನೇಮಕಗೊಂಡು ೧೯೭೯ರಲ್ಲಿ ನಿವೃತ್ತರಾದರು.

Books By Nadoja H L Nage Gowda