Na Mogasale

Na Mogasale

ನಾ.ಮೊಗಸಾಲೆ ಎನ್ನುವ ಹೆಸರಿನಲ್ಲಿ ಓದುಗರಿಗೆ ಪರಿಚಿತರಾದ ಡಾ| ನಾರಾಯಣ ಭಟ್ಟ, ಮೊಗಸಾಲೆ ಇವರು ಹುಟ್ಟಿದ್ದು ೧೯೪೪ ಅಗಸ್ಟ ೨೭ ರಂದು . ಅವರು ಹುಟ್ಟಿದ ಊರು ಸಾರ್ಕುಡೇಲು ಮನೆ. ಈ ಗ್ರಾಮ ಇದೀಗ ಕಾಸರಗೋಡು ಜಿಲ್ಲೆಯ ಕೇರಳ ರಾಜ್ಯದಲ್ಲಿ ಮಂಜೇಶ್ವರದ ಹತ್ತಿರ ಇದೆ. ೧೯೪೯ರಲ್ಲಿ ತಂದೆ ತೀರಿಕೊಂಡದ್ದರಿಂದ ಮೊಗಸಾಲೆಯವರು ಚಿಕ್ಕಪ್ಪನ ಸುಪರ್ದಿನಲ್ಲಿ ಬೆಳೆದರು. ೧೯೬೧ರಲ್ಲಿ ಎಸ್.ಎಸ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ, ಉಡುಪಿಯ ಆಯುರ್ವೇದ ಕಾಲೇಜಿನಲ್ಲಿ ಕಲಿತು, ೧೯೬೫ರಲ್ಲಿ ಡಿ.ಎಸ್.ಸಿ.ಎ. ಪದವಿಯನ್ನು ಪಡೆದರು.
೧೯೬೫ರಲ್ಲಿ ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದಲ್ಲಿ ಅರೆಕಾಲಿಕ ವೈದ್ಯರೆಂದು ಮೊಗಸಾಲೆಯವರು ನೇಮಕಗೊಂಡರು. ಕೇವಲ ವೈದ್ಯಕೀಯ ವೃತ್ತಿಗೆ ತಮ್ಮನ್ನು ಸೀಮಿತಗೊಳಿಸದ ಮೊಗಸಾಲೆಯವರು ೧೯೬೬ರಲ್ಲಿ ‘ರೈತ ಯುವಕ ವೃಂದ’ ವನ್ನು ಸಂಘಟಿಸಿದರು. ೧೯೭೬ರಲ್ಲಿ ‘ಕಾಂತಾವರ ಕನ್ನಡ ಸಂಘ’ವನ್ನು ಸ್ಥಾಪಿಸಿದರು. ೧೯೭೮ರಲ್ಲಿ ‘ವರ್ಧಮಾನ ಪ್ರಶಸ್ತಿ ಪೀಠ’ವನ್ನು ಸಂಘಟಿಸಿ ಅದರ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೊಗಸಾಲೆ ಯವರ ವಿವಾಹ ಕಾಂತಾವರ ರಾಮಕೃಷ್ಣಯ್ಯನವರ ಮಗಳು ಪ್ರೇಮಲತಾ ಇವರೊಡನೆ ೧೯೬೬ರಲ್ಲಿ ಜರುಗಿತು. ಇವರಿಗೆ ಮೂರು ಜನ ಗಂಡು ಮಕ್ಕಳು.
ಬರವಣಿಗೆ ಹಾಗು ಸಂಘಟನೆಗಳ ಮೂಲಕ ನಾ.ಮೊಗಸಾಲೆಯವರು ಕನ್ನಡ ಸಾಹಿತ್ಯ ಕ್ಕೆ ಬಹುಮುಖ ಸೇವೆ ಸಲ್ಲಿಸಿದ್ದಾರೆ.

Books By Na Mogasale