Mitra Venkatraj

Mitra Venkatraj

ಮಿತ್ರಾ ವೆಂಕಟ್ರಾಜ್ ಅವರು 1948ರ ಜುಲೈ 11ರಂದು ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದರು. ಕನ್ನಡ ಕಥಾಸಾಹಿತ್ಯದಲ್ಲಿ ತಮ್ಮದೇ ಆದ ವಿಶಿಷ್ಟ ಮುದ್ರೆ ಮೂಡಿಸಿದ್ದ ಅವರು, “ರುಕುಮಾಯಿ, ಹಕ್ಕಿ ಮತ್ತು ಅವಳು” ಎಂಬ ಕಥಾಸಂಕಲನ, “ಬೊಗಸೆಯಲ್ಲಿಟ್ಟು ಬೆಳಕು ತುಂಬಿ”, “ಮುಗಿಲು ಮಲ್ಲಿಗೆಯ ಎಟಕಿಸಿ” ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ಸಂಪಾದಕೆಯಾಗಿ, “ಕತೆಹೇಳೆ” (ಮುಂಬೈ ಲೇಖಕಿಯರ ಕಥಾಸಂಕಲನ) ಮತ್ತು “ಬೆಳಕಿನೆಡೆಗೆ” (ಮುಂಬೈ ಲೇಖಕಿಯರ ಲೇಖನಗಳ ಸಂಗ್ರಹ) ಎಂಬ ಸಂಕಲನಗಳನ್ನು ಹೊರತಂದಿದ್ದಾರೆ.

ತಮ್ಮ ಸಾಹಿತ್ಯ ಕೃತಿಗಳಿಗೆ ಹಲವು ಪ್ರಶಸ್ತಿಗಳು ಸಂದಿವೆ. “ಒಂದು ಬಸ್ಸಿಗೆ ಒಯ್ಯುವುದಿತ್ತು” ಎಂಬ ಕಥೆಗೆ ದಿಲ್ಲಿಯ ಕಥಾಪ್ರಶಸ್ತಿ, “ಹಕ್ಕಿ ಮತ್ತು ಅವಳು” ಸಂಕಲನಕ್ಕೆ ರತ್ನಮ್ಮ ಹೆಗಡೆ ಪ್ರಶಸ್ತಿ ಲಭಿಸಿದೆ. ಅಲ್ಲದೇ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತರಾಷ್ಟ್ರೀಯ ಮಹಿಳಾವರ್ಷದ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಹೆಚ್.ವಿ. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ, ಕಾಂತಾವರದ ವರ್ಧಮಾನ ಸಾಹಿತ್ಯ ಪ್ರಶಸ್ತಿ ಮುಂತಾದ ಗೌರವಗಳು ಅವರ ಹಾಸಿಗೆ ಬಂದಿದೆ.

Books By Mitra Venkatraj