Meghana Sudhindra

Meghana Sudhindra

ಮೇಘನಾ ಸುಧೀಂದ್ರ ಅವರು ಹುಟ್ಟಿದ್ದು ಬೆಂಗಳೂರಿನ ಜಯನಗರದ ಕತ್ತರಿಗುಪ್ಪೆಯಲ್ಲಿ.ಬಾರ್ಸಿಲೋನಾದಲ್ಲಿ ಓದಿ Master of Science in Artificial Intelligence and Signal Processing ಪದವಿ ಪಡೆದುಕೊಂಡಿದ್ದಾರೆ. ತಮ್ಮ ಓದಿನ ದಿನಗಳಲ್ಲಿದ್ದಾಗಲೇ ಒನ್ ಇಂಡಿಯಾದಲ್ಲಿ ಹಳೆ ಬೆಂಗಳೂರಿನ ಕಥೆಗಳು, ಪ್ರಸಂಗಗಳನ್ನು ಅಂಕಣ ರೂಪದಲ್ಲಿ “ಜಯನಗರದ ಹುಡುಗಿ” ಎಂಬ ಹೆಸರಿನಲ್ಲಿ ಬರೆದು ನಿರ್ವಹಣೆ ಮಾಡುತ್ತಿದ್ದರು.

ಜಯನಗರದ ಹುಡುಗಿ ಎಂದೇ ಖ್ಯಾತರಾದ ಮೇಘನಾ ಸುಧೀಂದ್ರರವರು ಬಾರ್ಸಿಲೋನಾದಲ್ಲಿ ಏಐ ವಿಷಯದಲ್ಲಿ ಪರಿಣಿತಿ ಪಡೆದು ಈಗ ಬೆಂಗಳೂರಿನ ಒಂದು ಖಾಸಗಿ ಸಂಸ್ಥೆಯಲ್ಲಿ ಟೀಮ್ ಲೀಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಾವಣ್ಣ ಪ್ರಕಾಶನದ ಜಯನಗರದ ಹುಡುಗಿ ಮೊದಲ ಪ್ರಕಟಿತ ಪುಸ್ತಕ, ಎರಡು ಆನ್ಸನ್ ಮ್ಯಾಗಝೀನುಗಳಿಗೆ ಅಂಕಣ ಬರೆಯುತ್ತಿದ್ದಾರೆ. 2019ರಲ್ಲಿ ನಡೆದ ವಿಜಯ ಕರ್ನಾಟಕದ ಯುಗಾದಿ ಕಥಾ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ವಿಜೇತರು. ಲಿಪಿಯ ಪತ್ರಗಳು ಇವರ ಎರಡನೇ ಪುಸ್ತಕ. #AI ಕಥೆಗಳು ಇವರ ಮೊದಲ ಕಥಾ ಸಂಕಲನ.

ಮೇಘನಾರವರು ಈಗಿನ ಕಾಲದ ಮಿಲೇನಿಯಲ್ ಪೀಳಿಗೆಯ ಕಥಾ ವಸ್ತುಗಳನ್ನು, ಚರ್ಚೆ ಮತ್ತು ಸಂವಾದದ ಮೂಲಕ ಜನರಿಗೆ ಕನ್ನಡದ ಹೊಸ ಪುಸ್ತಕಗಳನ್ನು ತಲುಪಿಸುತ್ತಿದ್ದಾರೆ. ಕನ್ನಡಗೊತ್ತಿಲ್ಲ ಸಂಸ್ಥೆಯಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಕಾಯಕದಲ್ಲಿ 6 ವರ್ಷದಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಹೊಸ ಪೀಳಿಗೆಯ ಕಥೆಗಳು ಬರೆಯುವುದು ಇವರ ಅಭ್ಯಾಸ, ಚಾರಣ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಇವರ ಆಸಕ್ತಿ.

Books By Meghana Sudhindra