Lingaraju D S

Lingaraju D S

ಲೇಖಕ ಡಿ.ಎಸ್. ಲಿಂಗರಾಜು, ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು, ಮಾಯಸಂದ್ರದವರು. ತಂದೆ- ಡಿ.ಎಸ್. ಶಿವರಾಜೇಗೌಡ, ತಾಯಿ- ಬಿ.ಕೆ ಜಯಮ್ಮ. ಮಾಯಸಂದ್ರ, ತುರುವೇಕೆರೆ, ಕೋಲಾರ ಮತ್ತು ಚುಂಚನಗಿರಿಯಲ್ಲಿ ವಿದ್ಯಾಭ್ಯಾಸ. ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ ಎ ಪದವಿ (1985), ಕೆಲಕಾಲ ಕುಣಿಗಲ್ ತಾಲೂಕು ಎಡೆಯೂರಿನ ಕಾಲೇಜೊಂದರಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ. ನಂತರ ಕೆಎಎಸ್ ಗೆಜೆಟೆಡ್ ಪರೀಕ್ಷೆಯಲ್ಲಿ ಆಯ್ಕೆಯಾಗಿ 1991 ರಿಂದ ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಣೆ, ಪ್ರಸ್ತುತ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಕಾಲಿಸುತ್ತಿದ್ದಾರೆ.
ತುಷಾರ ಮಾಸ ಪತ್ರಿಕೆಯ ದೇಶ-ವಿದೇಶಗಳ ಪರಿಚಯ ಮಾಲೆಯಲ್ಲಿ ಸುಮಾರು 40ಕ್ಕೂ ಹೆಚ್ಚು ವಿಸ್ತ್ರತ ಲೇಖನಗಳು ಪ್ರಕಟಗೊಂಡಿವೆ. ತರಂಗ ಮತ್ತು ಕರ್ಮವೀರ ಸಾಪ್ತಾಹಿಕಗಳಲ್ಲಿ ನಿಯಮಿತವಾಗಿ ವಿವಿಧ ವಿಷಯಗಳ ಬಗ್ಗೆ ಲೇಖನಗಳು ಪ್ರಕಟವಾಗುತ್ತಿವೆ. ’ಮಾಯಾಲೋಕಕ್ಕೊಂದು ಪಯಣ’ (2013), `ಮಾತೃದೇವತೆಗಳು ಮತ್ತು ಮಹಾಶಕ್ತಿ ಪೀಠಗಳು’ (2014) ಇವರ ಪ್ರಕಟಿತ ಕೃತಿಗಳು.”ಸಾವು-ಒಂದು ಹುಡುಕಾಟ’ (2017) ಇವರ ಈಚಿನ ಕೃತಿ.

Books By Lingaraju D S