ಟಾಲ್ ಸ್ಟಾಯ್, “ಯಾಸ್ನ್ಯಾ ಪೊಲ್ಯಾನ,” ಎಂಬ ಹಳ್ಳಿಯಲ್ಲಿ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರು. ಟಾಲ್ ಸ್ಟಾಯ್ ಹೆಸರಿನ ಹಿಂದೆ ‘ಕೌಂಟ್,’ ಅನ್ನುವ ಶಬ್ದ ಸೇರುವುದು ಈ ಕಾರಣದಿಂದಾಗಿ. ಬಾಲ್ಯದಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡ ಟಾಲ್ ಸ್ಟಾಯ್, ಸಾವು-ನೋವುಗಳ ಬಗ್ಗೆ ಆಗಲೇ ತಾತ್ವಿಕ ಚಿಂತನೆ ನಡೆಸಿದ್ದರು. ಕಜಾನ್ ವಿಶ್ವವಿದ್ಯಾಲಯ,ದಲ್ಲಿ ಕಾನೂನು ಅಭ್ಯಾಸಮಾಡಲು ಹೋದ ಟಾಲ್ ಸ್ಟಾಯ್ ಅದನ್ನು, ಅರ್ಧಕ್ಕೇ ಕೈಬಿಟ್ಟು ಊರಿಗೆ ಮರಳಿದರು. ಮನೆಯ ಆಸ್ತಿಪಾಲಾದಾಗ, ಟಾಲ್ ಸ್ಟಾಯ್ ರವರ ಪಾಲಿಗೆ, ೫,೪೦೦ ಎಕರೆ ಭೂಮಿ, ಮತ್ತು ೩೩೦ ಜೀತದಾಳುಗಳು ಬಂದಿದ್ದರು !
ಟಾಲ್ ಸ್ಟಾಯ್, ಸ್ವಲ್ಪಕಾಲ ಕೃಷಿ ಮಾಡಿಸಲು ತೊಡಗಿದ್ದರು. ಹಳ್ಳಿಯ ಮಕ್ಕಳಿಗಾಗಿ ಶಾಲೆ ತೆರೆದರು. ಮತ್ತೆ ಹಳ್ಳಿ ಬಿಟ್ಟು ಸೈನ್ಯಕ್ಕೆ ಸೇರಿದರು. ಈ ಅವಧಿಯಲ್ಲಿ ಅವರಿಗೆ ಕೆಲವು ದುಶ್ಚಟಗಳಿದ್ದವು. ಕೊನೆಗೆ, ತಮ್ಮ ಅದುವರೆಗಿನ ಜೀವನದ ಬಗ್ಗೆ ಪಶ್ಚಾತ್ತಾಪಪಟ್ಟುಕೊಂಡು ‘ಸೋನ್ಯ’, ಎಂಬವಳನ್ನು ಮದುವೆಯಾಗಿ ಹಳ್ಳಿಗೆ ಹಿಂದಿರುಗಿದರು. ಅವರ ಮುಂದಿನ ಜೀವನವನ್ನೆಲ್ಲ ಹಳ್ಳಿಗರ ಉದ್ಧಾರಕ್ಕಾಗಿ ಮೀಸಲಾಗಿಟ್ಟರು.
ಅವರು ತಮ್ಮನ್ನು ತಾವೇ, “ಋಷಿ,” ಯೆಂದು ಭಾವಿಸಿಕೊಂಡು ಅದರಂತೆ ಬದುಕಲು ಪ್ರಯತ್ನಿಸಿದರು. ಕೊನೆಗೆ ಮನೆಬಿಟ್ಟು ಬೈರಾಗಿಯಂತೆ ದೇಶಾಂತರ ಹೋಗಿಟಾಲ್ ಸ್ಟಾಯ್, ತಮ್ಮ ಎರಡು ಕಾದಂಬರಿಗಳು, ‘ವಾರ್ ಅಂಡ್ ಪೀಸ್,’ [೧೮೬೩-೬೯] ಮತ್ತು ಅನ್ನಾ ಕರೆನಿನಾ’ [೧೮೭೫-೭೭] ಮತ್ತು ಸಣ್ಣಕತೆಗಳಿಂದಾಗಿ ಸಾಹಿತ್ಯ ಲೋಕದಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ. ನೀಳ್ಗತೆಗಳು, ಮಕ್ಕಳಿಗಾಗಿ ನಿರೂಪಿಸಿದ ಕಥೆಗಳು, ಹೀಗೆ ಅವರ ಸಾಹಿತ್ಯಸೃಷ್ಟಿ, ಇತರ ಪ್ರಕಾರಗಳಲ್ಲೂ ನಡೆದಿದೆ. ಕೊನೆಗೆ ಅವರು, ರೈಲು ನಿಲ್ದಾಣವೊಂದರಲ್ಲಿ ಕೊನೆಯುಸಿರೆಳೆದರು.
ಟಾಲ್ ಸ್ಟಾಯ್ ಅವರ ಇಪ್ಪತ್ತುಮೂರು ಸಣ್ಣಕತೆಗಳು ವಿಶಿಷ್ಟವಾಗಿವೆ. ಇವುಗಳನ್ನು ಅವರು ‘ಮಕ್ಕಳ ಕಥೆಗಳು’ ಜನಪ್ರಿಯ ಕಥೆಗಳು, ಒಂದು ಅಪ್ಸರ ಕಥೆ, ಚಲನಚಿತ್ರಗಳಿಗೆ ಬರೆದ ಕಥೆ, ಜಾನಪದ ಕಥೆಗಳ ಮರುನಿರೂಪಣೆ, ಫ್ರೆಂಚಿನಿಂದ ಅನುವಾದಿಸಿದ ಕಥೆಗಳು.