ಲಕ್ಷ್ಮೀಶ್ ಹೆಗಡೆ ಸೋಂದಾ, ಇತಿಹಾಸಕಾರರಾಗಿ, ವಾಗ್ಮಿಗಳಾಗಿ ನಾಡಿನ ಚಿರಪರಿಚಿತ ಹೆಸರು. ಕಳೆದ 15 ವರ್ಷಗಳಿಂದ ಇತಿಹಾಸ ಸಂಶೋಧನೆಯಲ್ಲಿ ಸಕ್ರಿಯರಾಗಿ ಹಲವಾರು ಶಾಸನಗಳು, ವೀರಗಲ್ಲುಗಳು, ಐತಿಹಾಸಿಕ ಕುರುಹುಗಳನ್ನು ಸಂಶೋಧಿಸಿ ಅವುಗಳನ್ನು ಅಭ್ಯಸಿಸಿ ಸಮಾಜಕ್ಕೆ ಪರಿಚಯಿಸಿರುತ್ತಾರೆ. ಇದುವರೆಗೂ 13 ಕೃತಿಗಳು, 400 ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಸಂಶೋಧನೆಗಾಗಿ 2013 ರಲ್ಲಿ ಬಸವರಾಜ ಕಟ್ಟಿಮನಿ ರಾಜ್ಯ ಪ್ರಶಸ್ತಿ ಮತ್ತು 2016 ರಲ್ಲಿ ಕದಂಬ ಸೇವಾರತ್ನ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿ ವರ್ಷ ಇವರ ಸಂಚಾಲಕತ್ವದಲ್ಲಿ ನಡೆಯುವ ಸೋಂದಾ ಇತಿಹಾಸೋತ್ಸವ ನಾಡಿನಲ್ಲಿ ಪ್ರಸಿದ್ಧಿ ಪಡೆದಿದೆ.
ಯುವ ಜನತೆಯಲ್ಲಿ ಸ್ಥಳೀಯ ಇತಿಹಾಸದ ಕುರಿತು ಆಸಕ್ತಿ ಮೂಡಿಸಲು ಕಳೆದ 6 ವರ್ಷಗಳಿಂದ ಇವರು ನಡೆಸಿಕೊಂಡು ಬರುತ್ತಿರುವ ‘ಉತ್ತರ ಕನ್ನಡ ಜಿಲ್ಲಾ ಚರಿತ್ರಾ ಅಭಿಯಾನ’ ಆದರ್ಶ ಸಮಾಜದ ಸ್ಥಾಪನೆಗೊಂದು ಮಾದರಿ ಯೋಜನೆಯಾಗಿದೆ. ಪ್ರಸ್ತುತ ಮಂಗಳೂರಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.