ಕೆದಂಬಾಡಿ ಜತ್ತಪ್ಪ ರೈಇವರು ಕನ್ನಡದ ಲೇಖಕರಲ್ಲಿ ಇವರು ಒಬ್ಬರು, ಇವರು ಬೇಟೆ ಸಾಹಿತ್ಯದಕುರಿತು ಅನೇಕ ಬರಹಗಳನ್ನುಪ್ರಕಟಿಸಿದ್ದಾರೆ ಇವರ ಹುಟ್ಟೂರು ಪುತ್ತೂರು ಆಗಿದ್ದು. ಜನನ ೧೧/೨/೧೯೧೬.
ಇವರು ಕನ್ನಡದ ಪ್ರಪ್ರಥಮ ಮೃಗಯಾ ಸಾಹಿತಿ. ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಪ್ರಕಾರವನ್ನು ಹುಟ್ಟುಹಾಕಿದವರು.ಇವರು ಓದಿದ್ದು ಆರನೇ ತರಗತಿ.ವೃತ್ತಿಯಿಂದ ಬೇಸಾಯಗಾರನಾಗಿದ್ದರೂ ಪ್ರವೃತ್ತಿಯಿಂದ ನಿಪುಣ ಬೇಟೆಗಾರ ಹಾಗೂ ಪ್ರವಚನಗಾರ ಹಾಗೂ ತುಳುಬಾಷೆಯಲ್ಲಿ ಪ್ರಮುಖ ಅನುವಾದಕಾರ.
ಕೃತಿಗಳು – ಬೇಟೆಯ ನೆನಪುಗಳು, ಈಡೊಂದು ಹುಲಿ, ಬೇಟೆಯ ಉರುಲು, ಬೆಟ್ಟದ ತಪ್ಪಲಿಂದ ಕಡಲತಡಿಗೆ.
ಕನ್ನಡದಿಂದ ತುಳುವಿಗೆ ಅನುವಾದ – ಶಿವರಾಮ ಕಾರಂತರ ಚೋಮನ ದುಡಿ, ಕುವೆಂಪುರವರ ‘ಬೆರಳ್ಗೆ ಕೊರಳ್’ ನಾಟಕವನ್ನು ‘ಶೂದ್ರ ಏಕಲವ್ಯೆ’ಎಂಬುದಾಗಿ, ಉಮರನ ಒಸಗೆಯನ್ನು ‘ಕುಜಿಲ್ ಪೂಜೆ’ ಎಂಬುದಾಗಿ.
ಪ್ರಶಸ್ತಿ – ಕರ್ನಾಟಕ ಸಾಹಿತ್ಯ ಅಕಾಡೆಮಿ.