K Usha P Rai

K Usha P Rai

ಉಷಾ ಪಿ. ರೈ ಅವರು 1945ರ ಮೇ 23ರಂದು ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ ಜನಿಸಿದರು. ತಂದೆ: ದಿ.ಕೆ. ಹೊನ್ನಯ್ಯ ಶೆಟ್ಟಿ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ನವಯುಗ ಪತ್ರಿಕೆಯ ಸಂಪಾದಕ. ತಾಯಿ: ಕೆ. ಪದ್ಮಾವತಿ ಶೆಟ್ಟಿ. ಎಂ.ಎ ಪದವೀಧರೆ ಆಗಿರುವ ಉಷಾ ಪಿ. ರೈ ಕನ್ನಡದ ಹಿರಿಯ ಲೇಖಕಿಯಾಗಿದ್ದಾರೆ.


ಸಾಹಿತ್ಯ ಕೃಷಿ

ಉಷಾ ಪಿ. ರೈ ಅವರ ಇಪ್ಪತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. 1974ರಲ್ಲಿ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾದ ‘ಅನುಬಂಧ’ ಅವರ ಮೊದಲ ಕಾದಂಬರಿ.

ಪ್ರಮುಖ ಕಾದಂಬರಿಗಳು: ಪರಿಭ್ರಮಣ, ಉತ್ತರಣ, ಸುಪ್ತಸ್ವರ, ನಿಶಾನೆ, ಜಾಗೃತಿ, ನಿಯತಿ

ಕವನ ಸಂಕಲನಗಳು:ಕನಸುಗಳು ನನಸುಗಳು, ಹಕ್ಕು ಮತ್ತು ಗಿಡುಗ, ಊರುಗೋಲು

ಪ್ರಸಿದ್ಧ ಕಥೆಗಳು:

ಬದುಕೆಂಬ ಚದುರಂಗದಾಟದ ದಾಳಗಳು
ಒಂದೇ ದೋಣಿಯ ಪ್ರಯಾಣಿಕರು


ಸಾಹಿತ್ಯ ಮತ್ತು ಕಲಾ ಸೇವೆ

 ಉಷಾ ಪಿ. ರೈ ಅವರು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದರು.
 ಸಾಹಿತ್ಯವಲ್ಲದೆ, ಅವರು ಉತ್ತಮ ಚಿತ್ರ ಕಲಾವಿದೆಯೂ ಹೌದು.
 ಶಾಂತಿನಗರ ವಿಧಾನಸಭಾ ಕ್ಷೇತ್ರದ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಸ್ಥಾನ ವಹಿಸಿದ್ದರು.


 

ಪ್ರಶಸ್ತಿ ಮತ್ತು ಗೌರವಗಳು

 ಪದ್ಮಭೂಷಣ ಬಿ. ಸರೋಜದೇವಿ ಪ್ರಶಸ್ತಿ – ಕನ್ನಡ ಸಾಹಿತ್ಯ ಪರಿಷತ್ತು
 ಶ್ರೀಹರ್ಷ ಪ್ರಶಸ್ತಿ – ಕನ್ನಡ ಸಾಹಿತ್ಯ ಪರಿಷತ್ತು
 ನೀಲಗಂಗಾ ದತ್ತಿನಿಧಿ ಪ್ರಶಸ್ತಿ
 ಅಮ್ಮ ಪ್ರತಿಷ್ಠಾನದ ‘ಅಮ್ಮ ಪ್ರಶಸ್ತಿ’ – ‘ಹಕ್ಕು ಮತ್ತು ಗಿಡುಗ’ ಕೃತಿಗೆ

Books By K Usha P Rai