ಜಗದೀಶ್ ಶರ್ಮಾ ಸಂಪ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಸಂಪ ಗ್ರಾಮದವರು. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸಂಕೃತದಲ್ಲಿ ಎಂಎ ಮುಗಿಸಿದ್ದಾರೆ. ಅವರು ಶ್ರೀ ಮೇಧಾ ದಕ್ಷಿಣಾಮೂರ್ತಿ ವೇದಭವನ ಸಂಸ್ಕೃತ ಮಹಾವಿದ್ಯಾಲಯ ಗೋಕರ್ಣದಿಂದ ಕೃಷ್ಣ ಯಜುರ್ವೇದ ಕ್ರಮಾಂತವನ್ನು ಅಧ್ಯಯನ ಮಾಡಿದ್ದಾರೆ. ಮೈಸೂರಿನ ಶ್ರೀಮನ್ಮಹಾರಾಜ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಅಲಂಕಾರ ವಿದ್ವತ್ ಅಧ್ಯಯನ ಮಾಡಿದ್ದಾರೆ. ಅವರು ಅದ್ವೈತ ವೇದಾಂತ, ನ್ಯಾಯ ವೈಶೇಷಿಕ, ಸಾಂಖ್ಯ ಯೋಗದ ಆಳವಾದ ಅಧ್ಯಯನವನ್ನು ಹೊಂದಿದ್ದಾರೆ. ಪರಿಣಿತ ವಾಗ್ಮಿಯಾಗಿರುವ ಅವರು ರಾಷ್ಟ್ರೀಯ ಮಟ್ಟದ “ಸಂಸ್ಕೃತ ವಾಕ್ ಪ್ರತಿಯೋಗಿತಾ” ದಲ್ಲಿ ಎರಡು ಬಾರಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಅವರು ಸಂಸ್ಕೃತ ಸಾಹಿತ್ಯ, ಭಾಷೆ ಮತ್ತು ಯೋಗ, ಪುರಾಣ ಸಾಹಿತ್ಯದಂತಹ ಪ್ರಾಚೀನ ಜ್ಞಾನ ಕ್ಷೇತ್ರಗಳಲ್ಲಿ ಪ್ರವೀಣ ವಿದ್ವಾಂಸರಾಗಿದ್ದಾರೆ. ಸಮೃದ್ಧ ಬರಹಗಾರರಾಗಿ ಅವರು “ಭೀಷ್ಮ ಹೇಳಿದ ಮ್ಯಾನೇಜ್ಮೆಂಟ್ ಕಥೆಗಳು”, “ಮಹಾಭಾರತ ಹೇಳಿಯು ಹೇಳಿದ್ದು”, “ಪದ ಪಾಠ” ಸೇರಿದಂತೆ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕನ್ನಡಪ್ರಭ ಮತ್ತು ಹೊಸದಿಗಂತ ಪತ್ರಿಕೆಗಳಿಗೆ ಅಂಕಣಕಾರರೂ ಹೌದು. ಪ್ರಸ್ತುತ ಅವರು ಜ್ಞಾನ ವಿಜ್ಞಾನ ಅಧ್ಯಯನ ಕೇಂದ್ರದಲ್ಲಿ ಸಂಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.