ಎಚ್.ಎಸ್.ವೆಂಕಟೇಶಮೂರ್ತಿ , ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ, ಮೊದಲಾದ ಪ್ರಕಾರಗಳಲ್ಲಿ ತಮ್ಮ ಕೊಡುಗೆಯನ್ನು ಕೊಟ್ಟು ಕನ್ನಡ ಸಾಹಿತ್ಯ ಕ್ಷೇತ್ರವನ್ನು , ಹಳೆಯ ಸಂಪ್ರದಾಯದಲ್ಲಿ ಕೃಷಿಮಾಡಿ, ಆಧುನಿಕ ಸಾಹಿತ್ಯದ ಕೃತಿಗಳನ್ನು ಸಾಹಿತ್ಯ ಪ್ರಿಯರಿಗೆ ಕೊಟ್ಟ ಮಹತ್ವದ ಲೇಖಕರಲ್ಲೊಬ್ಬರು. (ಜನನ:ಜೂನ್,೨೩,೧೯೪೪), ಈಗ ಮಕ್ಕಳ, ಯುವಕರ, ಮತ್ತು ಮಹಿಳೆಯರಿಗೆ ಬೇಕಾದ ಗೀತೆಗಳನ್ನು ರಚಿಸಿ, ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ೮೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು.
ತಾಯಿಯ ತೌರುಮನೆಯಲ್ಲಿ ನಡೆಯುತ್ತಿದ್ದ ಗಮಕವಾಚನ, ನಾಟಕ, ಸಾಂಸ್ಕೃತಿಕ ಕಾರ್ಯ ಕ್ರಮಗಳು ಮನಸ್ಸಿನ ಮೇಲೆ ಮಾಡಿದ ಪ್ರಭಾವದಿಂದ ಕವನ ಬರೆಯಲು ಪ್ರೇರಣೆ.
ಡಾ.ಎಚ್.ಎಸ್.ವೆಂಕಟೇಶ ಮೂರ್ತಿಯವರಿಗೆ, ಸನ್.೨೦೧೨ ರ, ನವೆಂಬರ್, ೧೮ ರಂದು, ‘ಡಾ. ಡಿ.ಎಸ್.ಕರ್ಕಿಯವರ ಜನ್ಮ ಶತಮಾನೋತ್ಸವದ ಶುಭಸಮಾರಂಭ’ದಂದು ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ‘ಚಂದ್ರವದನ ದೇಸಾಯಿ ಸಭಾಗೃಹ’ದಲ್ಲಿ ಡಾ. ಕರ್ಕಿ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಡಾ. ಕರ್ಕಿಯವರ ಸಮಗ್ರ ಸಾಹಿತ್ಯ ಸಂಪುಟಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರಶಸ್ತಿ ಪ್ರದಾನ ಮಾಡಿದರು. ಈ ಪುರಸ್ಕಾರ, ಎಚ್ಚೆಸ್ವಿಯವರಿಗೆ ಅವರು ಬರೆದ ‘ಕನ್ನಡಿಯ ಸೂರ್ಯ’ ಎಂಬ ಕೃತಿಗೆ ಲಭಿಸಿದೆ.
೧೯೭೭: ‘ಸಿಂದಬಾದನ ಆತ್ಮಕಥೆ’-‘ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ’
೧೯೭೮: ‘ತಾಪಿ’-‘ದೇವರಾಜ ಬಹಾದ್ದೂರ ಪ್ರಶಸ್ತಿ’
೧೯೮೦: ‘ಅಮಾನುಷರು’-“ಸುಧಾ ಬಹುಮಾನ”
೧೯೮೧: ‘ಹೆಜ್ಜೆಗಳು’-“ ರಂಗಸಂಪದ” ಬಹುಮಾನ
೧೯೮೫: ‘ಇಂದುಮುಖಿ’-‘ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ’
೧೯೮೫: ‘ಹರಿಗೋಲು’-‘ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ’
೧೯೮೬: ‘ಅಗ್ನಿಮುಖಿ’-‘ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ’
೧೯೮೮: ‘ಋತುವಿಲಾಸ’: ‘ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರ’
೧೯೯೦: ‘ಎಷ್ಟೊಂದು ಮುಗಿಲು’: ‘ಬಿ.ಎಚ್.ಶ್ರೀಧರ ಪ್ರಶಸ್ತಿ’
೧೯೯೩: ‘ಒಂದು ಸೈನಿಕ ವೃತ್ತಾಂತ’-‘ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ’
೧೯೯೭: ‘ಹೂವಿನ ಶಾಲೆ’-‘ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ’
‘ಸ್ವಯಂವರ'(ಅಪ್ರಕಟಿತ)-“ಉಡುಪಿ ರಂಗಭೂಮಿ ಪುರಸ್ಕಾರ”.
೨೦೧೩: “ಬಾಲ ಸಾಹಿತ್ಯ ಪುರಸ್ಕಾರ, ಕೇಂದ್ರ ಸಾಹಿತ್ಯ ಅಕಾದೆಮಿ[೫],[೬]
೨೦೧೪: “ಅನಕೃ ನಿರ್ಮಾಣ್ ಪ್ರಶಸ್ತಿ”[೭]