ಕಾದಂಬರಿಕಾರ, ಅಂಕಣಕಾರ ಮತ್ತು ಅನುವಾದಕರಾಗಿರುವ ಗುರುರಾಜ ಕೊಡ್ಕಣಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದು, ಇಂಜಿನಿಯರಿಂಗ್ ಶಿಕ್ಷಣ ಪಡೆದಿದ್ದಾರೆ. ಈಗ ಭಾರತೀಯ ಜೀವ ವಿಮಾ ನಿಗಮದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಬರಹಯಾತ್ರೆಯನ್ನು ‘ಹಾಯ್ ಬೆಂಗಳೂರು’ ಮತ್ತು ‘ಹಿಮಾಗ್ನಿ’ ವಾರಪತ್ರಿಕೆಗಳ ಅಂಕಣಕಾರರಾಗಿ ಆರಂಭಿಸಿದ ಅವರು, ನಂತರ ಕಾದಂಬರಿಕಾರ ಹಾಗೂ ಅನುವಾದಕರಾಗಿ ಹೆಸರಾಗಿದ್ದಾರೆ. ‘ಅಂಕಣಕ್ಕೆ ಅನುವಾದಿತ ಕಥೆಗಳು’ ಎಂಬ ಇಂಗ್ಲಿಷ್ ಸಣ್ಣಕತೆಗಳ ಅನುವಾದ ಸಂಕಲನ ಪ್ರಕಟಿಸಿದ್ದಾರೆ. ಜೊತೆಗೆ, ಲಘು ಹರಟೆಯ ಶೈಲಿಯ ಬರಹಗಳ ಸಂಕಲನ ‘ಸವಿ ಸವಿನೆನಪು ಸಾವಿರ ನೆನಪು’ ಎಂಬ ಇ-ಬುಕ್ ಸಹ ಪ್ರಕಟಗೊಂಡಿದೆ.