Gopalakrishna Pai

Gopalakrishna Pai

Gopalakrishna Pai
Action : Profile image, Description
ಕಾಸರಗೋಡಿನ ಪೆರ್ಲ ಗೋಪಾಲಕೃಷ್ಣ ಪೈ ರವರು, ಕನ್ನಡ ಭಾಷೆಯಲ್ಲಿ ಕತೆ, ನಾಟಕ , ಪ್ರಬಂಧ, ಲೇಖನ ಕಾದಂಬರಿಗಳನ್ನು ಬರೆಯುವುದರಲ್ಲಿ ಪ್ರವೀಣರು. ನಾಟಕ ವಿಮರ್ಶೆ ಮೊದಲಾದ ಹಲವು ಪ್ರಕಾರಗಳಲ್ಲಿ ಕೈಯ್ಯಾಡಿಸಿ ಉತ್ತಮ ಸಾಹಿತ್ಯ ಕೃಷಿಯನ್ನು ಬೆಳೆಸುತ್ತಿರುವ ಗೋಪಾಲಕೃಷ್ಣ ಪೈ ರವರ ಮತ್ತಿತರ ಕೃತಿಗಳು
ಕಾದಂಬರಿಗಳು
• ಸ್ವಪ್ನ ಸಾರಸ್ವತ
• ಬ್ರಹ್ಮ (೨೦೨೦)
ಕಥಾ ಸಂಕಲನಗಳು
ಬೇಲಾಡಿ ಹರಿಶ್ಚಂದ್ರ (೨೦೨೦)
ಮೂರು ಮತ್ತಿಷ್ಟು (೨೦೧೦)
ಪ್ರಶಸ್ತಿಗಳು
ಸ್ವಪ್ನ ಸಾರಸ್ವತ ಕಾದಂಬರಿಗೆ ೨೦೧೦ ರ ಸಾಲಿನ ‘ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ದೊರೆತಿದೆ. ತಾಮ್ರಪತ್ರ, ಶಾಲು, ಹಾಗೂ ಒಂದು ಲಕ್ಷರೂಪಾಯಿಗಳ ನಗದು ಬಹುಮಾನವನ್ನು ಈ ಪ್ರಶಸ್ತಿವಿಜೇತರು ಪಡೆಯುತ್ತಾರೆ.
ಚಲನಚಿತ್ರ ಸಾಹಿತ್ಯ
’ಉಜ್ವಾಡು’ ಎಂಬ ಕೊಂಕಣಿ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಕಾಸರಗೋಡು ಚಿನ್ನಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಾಷ್ಟ್ರಮಟ್ಟದ ಉತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ವಿಜೇತ,ಖ್ಯಾತ ನಿರ್ದೇಶಕ, ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ ಕನಸೆಂಬ ಕುದುರೆಯನ್ನೇರಿ ಚಿತ್ರಕ್ಕೆ ಚಿತ್ರಕಥೆಯನ್ನು ರಚಿಸಿಕೊಟ್ಟಿದ್ದಾರೆ. ಪಿ.ಶೇಷಾದ್ರಿ ನಿರ್ದೇಶನದ ಬೆಟ್ಟದ ಜೀವ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಇವರ ಚಿತ್ರಕಥೆಗಾಗಿ ‘ಉತ್ತಮ ಚಿತ್ರಕಥೆ ಪ್ರಶಸ್ತಿ’ ದೊರೆತಿದೆ.

Books By Gopalakrishna Pai