ಲೇಖಕಿ ಲಕ್ಷ್ಮೀ ಜಿ ಪ್ರಸಾದ್ ಕಾಸರಗೋಡು ಜಿಲ್ಲೆಯ ಕೋಳ್ಯೂರಿನವರು. ಕನ್ನಡ, ಹಿಂದಿ, ಸಂಸ್ಕೃತದಲ್ಲಿ ಪಾಂಡಿತ್ಯವಿದ್ದು, ಕನ್ನಡ ಉಪನ್ಯಾಸಕರಾಗಿದ್ದಾರೆ. ತಂದೆ -ನಾರಾಯಣ ಭಟ್ ವಾರಣಾಸಿ, ತಾಯಿ -ಸರಸ್ವತಿ. ಪತಿ ಗೋವಿಂದ ಪ್ರಸಾದ ಪಂಜಿಗದ್ದೆ, ಮಗ- ಅರವಿಂದ.
ಉಜಿರೆಯ ಎಸ್ ಡಿಎಂ ಕಾಲೇಜಿನಲ್ಲಿ ಬಿಎ.ಸ್ಸಿ ಪದವಿ. ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ಎಂ.ಎ[ಕನ್ನಡ] ನಾಲ್ಕನೇ ರ‍್ಯಾಂಕ್. ಮಂಗಳೂರು ವಿಶ್ವ ವಿದ್ಯಾಲಯದಿಂದ ಎಂ.ಎ[ಸಂಸ್ಕ್ರತ] ಪ್ರಥಮ ರ‍್ಯಾಂಕ್. ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ಎಂಎ[ಹಿಂದಿ], ಎಂ.ಫಿಲ್[ವಿಷಯ:ಈಜೋ ಮಂಜೊಟ್ಟಿ ಗೋಣ-ಒಂದು -ವಿಶ್ಲೇಷಣಾತ್ಮಕ ಅಧ್ಯಯನ), ಪಿಹೆಚ್.ಡಿ[ವಿಷಯ:ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳ-ಒಂದು ವಿಶ್ಲೇಷಣಾತ್ಮಕ ಅಧ್ಯಯನ) ಹಂಪಿ ಕನ್ನಡ ವಿಶ್ವ ವಿದ್ಯಾಲಯ. ಎರಡನೆಯ ಪಿಹೆಚ್.ಡಿ ಪದವಿ (ವಿಷಯ‘ಪಾಡ್ದನಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ’) ದ್ರಾವಿಡ ವಿಶ್ವ ವಿದ್ಯಾಲಯ ಕುಪ್ಪಂ, ಬಿ ಎಡ್ ಬೆಂಗಳೂರು ವಿಶ್ವ ವಿದ್ಯಾಲಯ , ಎನ್.ಇ.ಟಿ-ಯುಜಿಸಿ, ಕನ್ನಡ ಶಾಸನ ಮತ್ತು ಲಿಪಿ ಶಾಸ್ತ್ರ ಡಿಪ್ಲೋಮಾ (ಪ್ರಥಮ ರ‍್ಯಾಂಕ್).
ಕೃತಿಗಳು: ತುಂಡು ಭೂತಗಳು-ಒಂದು ಅಧ್ಯಯನ, ತುಳು ಜನಪದ ಕಾವ್ಯಗಳಲ್ಲಿ ಕಾವ್ಯ ತತ್ವಗಳು , ಬೆಳಕಿನೆಡೆಗೆ, ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು, ತುಳು ಪಾಡ್ದನಗಳಲ್ಲಿ ಸ್ತ್ರೀ, ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು, ತುಳು ಜನಪದ ಕವಿತೆಗಳು, ಪಾಡ್ದನ ಸಂಪುಟ, ಕಂಬಳ ಕೋರಿ ನೇಮ, ತುಳು ನಾಡಿನ ಅಪೂರ್ವ ಭೂತಗಳು, ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಪಾಡ್ದನಗಳು, ದೈವಿಕ ಕಂಬಳ ಕೋಣ, ಅರಿವಿನಂಗಳದ ಸುತ್ತ, ಮನೆಯಂಗಳದಿ ಹೂ, ನಾಗ ಬ್ರಹ್ಮ ಮತ್ತು ಕಂಬಳ –ಒಂದು ವಿಶ್ಲೇಷಣಾತ್ಮಕ ಅಧ್ಯಯನ, ಭೂತಗಳ ಅದ್ಭುತ ಜಗತ್ತು, ಶಾರದಾ ಜಿ ಬಂಗೇರರ ಮೌಖಿಕ ಜಾನಪದ, ಬಂಗಲೆ ಗುಡ್ಡ ಸಣ್ಣಕ್ಕ ನ ಮೌಖಿಕ ಜಾನಪದ, ಸುಬ್ಬಿ ಇಂಗ್ಲಿಷ್ ಕಲ್ತದು ಮತ್ತು ಇತರ ನಾಟಕಗಳು, ಶಿಕ್ಷಣ ಲೋಕ, ಕರಾವಳಿಯ ಸಾವಿರದೊಂದು ದೈವಗಳು, ಬಸ್ತರ್ ಜಾನಪದ,