ಬೆಳಗಾವಿ ಜಿಲ್ಲೆ ಅಥಣಿ (ಈಗ ಕಾಗವಾಡ) ತಾಲೂಕಿನ ಮೋಳೆ ಗ್ರಾಮದಲ್ಲಿ ೧೯೭೭ರಲ್ಲಿ ಜನನ, ಪ್ರಾಥಮಿಕ ಹಾಗು ಮಾಧ್ಯಮಿಕ ಶಿಕ್ಷಣ ಹುಟ್ಟೂರಿನಲ್ಲಿ ಪಿಯೂಸಿ ಧಾರವಾಡದ ಕರ್ನಾಟಕ ಸೈನ್ಸ್ ಕಾಲೇಜಿನಲ್ಲಿ, ವೈದ್ಯಕೀಯ ಪದವಿ ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ, ಮೈಸೂರು ವಿ.ವಿ.ಯಿಂದ ‘ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ’ದಲ್ಲಿ ಡಿಪ್ಲೋಮಾ ಪದವಿ ಮತ್ತು ಡಿಪ್ಲೋಮಾ ಇನ್ ಫಾರ್ಮಾಸಿ ತುಮಕೂರಿನ ಜಿಲ್ಲೆ ಕೊರಟಗೆರೆ ಕಾಲೇಜಿನಿಂದ, ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಖಾಸಗಿ ವೈದ್ಯ ವೃತ್ತಿ. ಪ್ರಥಮ ಕವನ ಸಂಕಲನ ‘ಎಲೆಕ್ನಿಕ್ ಬೇಲಿ ಮತ್ತು ಪಾರಿವಾಳ’ ಹಸ್ತಪ್ರತಿಗಾಗಿ ಕಣವಿ ಕಾವ್ಯ ಪ್ರಶಸ್ತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ ‘ದತ್ತಿ ಬಹುಮಾನ’, ಎರಡನೆ ಕವನ ಸಂಕಲನ ‘ಅಪ್ಪನ ಅಂಗಿ’ ಕೃತಿಗೆ ವಿಭಾ ಕಾವ್ಯ ಪ್ರಶಸ್ತಿ (ಹಸ್ತಪ್ರತಿ) ವೀಚಿ ಪ್ರಶಸ್ತಿ ಹಾಗು ಅಡ್ಡೆಸರ್ ಪ್ರಶಸ್ತಿ ಪಡೆದುಕೊಂಡಿದೆ. ‘ಗರ್ದಿ ಗಮ್ಮತ್ತು ನೋಡಾ ಗೋಳ ಗುಮ್ಮಟ ನೋಡಾ’ ಪ್ರಕಟಿತ ಕೃತಿಗಳು. ಕತೆ, ಕವಿತೆ, ಪ್ರಬಂಧ, ಅಂಕಣ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಇದು ಅಮೂಲ್ಯ ಪುಸ್ತಕ ಪ್ರಕಟಿಸುತ್ತಿರುವ ‘ಮಿಲ್ಟಿ ಟ್ರಂಕು’ ಲೇಖಕರ ನಾಲ್ಕನೆಯ ಕೃತಿ.