Dr K N Ganeshaiah

Dr K N Ganeshaiah

ಡಾ. ಕೆ.ಎನ್. ಗಣೇಶಯ್ಯನವರು ಒಬ್ಬ ಕ್ಕೃಷಿ ವಿಜ್ಞಾನಿ ಮತ್ತು ಕನ್ನಡದ ಪ್ರಮುಖ ಬರಹಗಾರರಲ್ಲೊಬ್ಬರು. ಮೂಲತಃ ಕೋಲಾರ ಜಿಲ್ಲೆಯವರು. ಬೆಂಗಳೂರಿನಲ್ಲಿರುವ ಕೃಷಿ ವಿಶ್ವವಿದ್ಯಾಲಯದಲ್ಲಿ ಫ್ರೊಫೆಸರ್ ಹಾಗೂ ಪ್ರಧಾನ ವಿಜ್ಞಾನಿಯಾಗಿದ್ದಾರೆ. ಇತಿಹಾಸ ಮತ್ತು ವೈಜ್ಞಾನಿಕ ವಿಷಯಗಳನ್ನೊಳಗೊಂಡ ರೋಚಕ ಕಥೆಗಳನ್ನು ಒಂದು ವಿಭಿನ್ನ ಶೈಲಿಯಲ್ಲಿ ಬರೆಯುವ ಮೂಲಕ ಕನ್ನಡದಲ್ಲಿ ಒಂದು ಹೊಸ ಬಗೆಯ ಸಾಹಿತ್ಯವನ್ನು ತಂದವರೆಂದು ಪ್ರಸಿದ್ಧಿಯಾಗಿದ್ದಾರೆ.
ಇವರು ಪರಿಸರ ಮತ್ತು ಜೀವವೈವಿಧ್ಯತೆಯ ಅಧ್ಯಯನ ಮತ್ತು ಸಂರಕ್ಷಣೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳು ಮತ್ತು ಹಲವು ವಿಜ್ಞಾನ ಪುಸ್ತಕಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಇತಿಹಾಸದ ಅಧ್ಯಯನ, ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಮೂಲಕ ಜಗತ್ತಿನ ವಿಜ್ಞಾನಿಗಳಲ್ಲಿ ಚಿರಪರಿಚಿತರಾಗಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟೀಯ ಸಂಘ ಸಂಸ್ಥೆಗಳಿಂದ ಪುರಸ್ಕೃತರಾಗಿದ್ದಾರೆ. ಜೀವವೈವಿಧ್ಯದ ಸಂರಕ್ಷಣೆಯ ಸಂಶೋಧನೆಯಲ್ಲಿ ಹಾಗೂ ಭಾರತದ ಜೀವಸಂಪತ್ತಿನ ಮಾಹಿತಿಯನ್ನು ಗಣಕೀಕರಿಸುವ ಪ್ರಮುಖ ಕಾರ್ಯದಲ್ಲಿ ನಿರತರು. ಜೊತೆಗೆ ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಸಸ್ಯ ಮತ್ತು ಕೀಟ ಸಂಪನ್ಮೂಲದ ನಕ್ಷೆಯನ್ನೂ ತಯಾರಿಸುತ್ತಿದ್ದಾರೆ. ಭಾರತದ ಹಲವಾರು ಸಂಘ-ಸಂಸ್ಥೆಗಳಿಗೆ ವೈಜ್ಞಾನಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತದ ಸಸ್ಯ, ಪ್ರಾಣಿ, ಅಣುಜೀವಿಗಳು, ಸಮುದ್ರದ ಜೀವ ಸಂಪತ್ತು ಇವನ್ನು ಕುರಿತು ಭಾರತ ಸರ್ಕಾರದ ಸಹಯೋಗದೊಂದಿಗೆ ಜೀವಸಂಪದ ಹೆಸರಿನಲ್ಲಿ ಇವರು ರೂಪಿಸಿದ ಸಿ.ಡಿ.ಗಳು ಬಿಡುಗಡೆಯಾಗಿವೆ. ಭಾರತದ ಸಸ್ಯಗಳ ಮೇಲಿನ ಜಾಲತಾಣ ಮತ್ತು ಸಿ.ಡಿ.ಗಳು ಪ್ರಪಂಚದ ವಿಜ್ಞಾನಿಗಳ ಗಮನ ಸೆಳೆದಿವೆ.

Books By Dr K N Ganeshaiah