Chandrashekar C R

Chandrashekar C R

ಸಿ. ಆರ್. ಚಂದ್ರಶೇಖರ್ ಅವರು ಮಾನಸಿಕ ಆರೋಗ್ಯ ತಜ್ಞರು. ಬೆಂಗಳೂರಿನ ನಿಮ್ಹಾನ್ಸ್(NIMHANS)ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. [೧]. ಇವರು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ದೆವ್ವ, ಭೂತ, ಭಾನಾಮತಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಆ ಬಗ್ಗೆ ಸಾಕಷ್ಟು ಅಧ್ಯಯನಗಳನ್ನು ನಡೆಸಿದ್ದಾರೆ [೨]. ಸಾವಿರಾರು ಭಾಷಣಗಳನ್ನು ನೀಡಿದ್ದಾರೆ. ೭೫೦ಕ್ಕೂ ಹೆಚ್ಚು ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ೮೫ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಿ.ಆರ್.ಸಿ ಯವರು ಮಾನಸಿಕ ಆರೋಗ್ಯ, ಸಾಮಾನ್ಯ ಆರೋಗ್ಯ, ಲೈಂಗಿಕ ವಿಜ್ಞಾನ, ವೈಚಾರಿಕ ಸಾಹಿತ್ಯ, ಕಾದಂಬರಿ, ಸಣ್ಣ ಕತೆ, ಅನುವಾದ ಸಾಹಿತ್ಯ ಮುಂತಾದ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ೧೯೮೬ರಲ್ಲೇ ಸ್ಥಾಪಿತವಾಗಿದ್ದ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿಗೆ ೧೯೯೪ರಲ್ಲಿ ಪುನಃಶ್ಚೇತನ ನೀಡಿದರು. ಹಲವಾರು ವಿದೇಶಗಳಿಗೆ ತಜ್ಞ ವೈದ್ಯರಾಗಿಯೂ ಮತ್ತು ಪ್ರವಾಸಿಗರಾಗಿಯೂ ಹೋಗಿಬಂದಿದ್ದಾರೆ.
ಸಾಹಿತ್ಯ ರಚನೆ
ಇವುಗಳಲ್ಲಿ ೩೦ಕ್ಕೂ ಹೆಚ್ಚು ಪುಸ್ತಕಗಳು ಮರು ಮುದ್ರಣಗಳನ್ನು ಕಂಡಿವೆ. ತೆಲುಗಿಗೆ ಅನುವಾದವಾಗಿರುವ ನಾಲ್ಕು ಕೃತಿಗಳು ನಾಲ್ಕು ಮುದ್ರಣಗಳಾಗಿವೆ. ಕನ್ನಡದ ಬಾನಾಮತಿ ೭ ಮುದ್ರಣಗಳನ್ನು ಕಂಡಿದ್ದರೆ ’ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳಿ’ ೬ ಮುದ್ರಣಗಳನ್ನು ಕಂಡಿದೆ.ಇಂಗ್ಲೀಷಿನಲ್ಲೂ ಸಹ ೧೦-೧೧ ಪುಸ್ತಕಗಳನ್ನು, ಕೈಪಿಡಿಗಳನ್ನು ರಚಿಸಿದ್ದಾರೆ.
ಪ್ರಶಸ್ತಿಗಳು
ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ
ಡಾ. ಎಸ್.ಎಸ್. ಜನರಾಂ ಪ್ರಶಸ್ತಿ
ಡಾ. ಎಚ್.ನರಸಿಂಹಯ್ಯ ದತ್ತಿ ಬಹುಮಾನ
ಭಾರತೀಯ ವೈದ್ಯಕೀಯ ಸಂಘದ ಡಾ. ಬಿ.ಸಿ.ರಾಯ್ ವೈದ್ಯ ದಿನಾಚರಣೆ ಪ್ರಶಸ್ತಿ
ಅಮೆರಿಕಾದವರಿಂದ ೧೯೯೭ ವರ್ಷದ ವ್ಯಕ್ತಿ
ಕನ್ನಡ ಪುಸ್ತಕ ಪ್ರಾಧಿಕಾರದ ‘ಡಾ.ಅನುಪಮಾ ನಿರಂಜನ ವೈದ್ಯಕೀಯ ವಿಜ್ಞಾನ ಸಾಹಿತ್ಯ ಪ್ರಶಸ್ತಿ’, 2012-13 [೩] [೪]
ಕೇಂದ್ರ ಸರ್ಕಾರದ ರಾಷ್ಟ್ರೀಯ ಪುರಸ್ಕಾರಕ್ಕೆ (ಎನ್‌ಸಿಎಸ್‌ಟಿಸಿ), 2001 [೫]
ಕೇಂದ್ರ ಸರಕಾರದ ಪದ್ಮಶ್ರೀ ಪುರಸ್ಕಾರ

Books By Chandrashekar C R