ಸಿ ಅಶ್ವತ್ಥ್ – (೧೯೩೯) ಹೆಸರಾಂತ ಸಂಗೀತ ನಿರ್ದೇಶಕರು, ಕಲಾವಿದರು. ಕನ್ನಡ ರಂಗಭೂಮಿ, ಸಿನೆಮಾ ಹಾಗೂ ಸುಗಮ ಸಂಗೀತ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿರುವ ಇವರು ಜನಿಸಿದ್ದು ಡಿಸೆಂಬರ್ ೨೯, ೧೯೩೯ರಲ್ಲಿ. ಇವರು ವ್ಯಾಸಂಗ ಮಾಡಿದ್ದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ. ಐ ಟಿ ಐ ನಲ್ಲಿ ೨೭ ವರ್ಷಗಳ ಕಾಲ ಸೇವೆ ಸಲ್ಲಿಸಿ ಕೊನೆಗೆ ೧೯೯೨ರಲ್ಲಿ ನಿವೃತ್ತಿ ಪಡೆದರು.
ಚಿಕ್ಕವರಿದ್ದಾಗಲೇ ಸಂಗೀತದಲ್ಲಿ ಆಸಕ್ತಿ ಹೊಂದಿದ ಇವರು ಹಿಂದೂಸ್ಥಾನೀ ಸಂಗೀತವನ್ನು ದೇವಗಿರಿ ಶಂಕರರಾವ್ ಅವರ ಬಳಿ ಕಲಿತು, ನಂತರ ನಾಟಕಗಳಿಗೆ ಸಂಗೀತ ನೀಡಿದರು. ಕಾಕನಕೋಟೆ ಚಿತ್ರದ ಮೂಲಕ ಚಿತ್ರ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟರು
ಮೂತ್ರಪಿಂಡ ಹಾಗೂ ಪಿತ್ತಕೋಶದ ತೊಂದರೆಯಿಂದ ಬಳಲುತ್ತಿದ್ದ ಇವರು ಡಿಸೆಂಬರ್ ೨೯, ೨೦೦೯ ರಂದು, ತಮ್ಮ ೭೧ನೇ ಜನ್ಮದಿನದಂದೇ ಕೊನೆಯುಸಿರೆಳೆದರು.