Beluru Ramamurthy

Beluru Ramamurthy

ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು. ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು. ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ.
‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ಬದುಕು ಎಂದರೆ ಹೀಗೇ, ಕಡಲಂಚಿನ ಚಂದ್ರಮ, ನಲ್ಮೆಯ ನೆಲೆ’ ಅವರ ಕಿರು ಕಾಂಬರಿಗಳು. ‘ಬೊಂಬಾಟ್‌ ಬೀಛಿ, ಮಿಡಿ ಮಿಡಿ ಕಾಮಿಡಿ’ ಅವರ ಹಾಸ್ಯ ಕೃತಿಗಳು.
ಸುಮಾರು 40ವರ್ಷಗಳಿಂದ ಕನ್ನಡ ಸಾಹಿತ್ಯ ಸೇವೆ ಮಾಡಿದ್ದಾರೆ. ಇದುವರೆಗೂ 800 ಹೆಚ್ಚು ಕಥೆಗಳು – ಹಾಸ್ಯ ಲೇಖನಗಳು – ಲಲಿತ ಪ್ರಬಂಧಗಳು 21 ಕಾದಂಬರಿಗಳು ,25 ಕಿರುಕಾದಂಬರಿಗಳ ಗುಚ್ಚ ( 50 ಕಿರುಕಾದಂಬರಿಗಳು ) , 24 ಹಾಸ್ಯ ಲೇಖನಗಳ ಸಂಗ್ರಹ ,8 ಕಥಾ ಸಂಕಲನಗಳು ,7ಸಂಪಾದಿತ ಕೃತಿಗಳು 2 ಶಿಶು ಸಾಹಿತ್ಯ , 1ಇಂಗ್ಲಿಷ್ ಪುಸ್ತಕ , 1 ಶ್ರೀ ಶಂಕರ ಚರಿತಾಮೃತ ( ಚೌಪದಿ ಕಾವ್ಯ ) , 5 ( ಪ್ರವಾಸ ಮತ್ತು ವಿಚಾರ ಧಾರೆ ಪ್ರಾಕಾರದಲ್ಲಿ ಪ್ರಕಟವಾಗಿದೆ). ಆಕಾಶವಾಣಿಯಲ್ಲಿ ಚಿಂತನ,ಕಥೆ, ಹಾಸ್ಯ ಭಾಷಣ, ರೂಪಕಗಳು, ನಾಟಕಗಳು ದೂರದರ್ಶನದ ಅನೇಕ ಧಾರವಾಹಿಗಳಿಗೆ ಸಂಭಾಷಣೆ ರಚನೆ ಮತ್ತು ಅಭಿನಯವನ್ನು ಮಾಡಿದ್ದಾರೆ.
ಪ್ರಶಸ್ತಿಗಳು: ಗೊರೂರು ಪ್ರಶಸ್ತಿ , ರನ್ನ ಪ್ರಶಸ್ತಿ, ಕೇಫ ಪ್ರಶಸ್ತಿ , ಪರಮಾನಂದ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ , ಸಾಹಿತ್ಯ ತೇಜಸ್ವಿ ಬಿರುದು .

Books By Beluru Ramamurthy