ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಅಶ್ವಿನಿ ಸುನಿಲ್ ಪ್ರಸ್ತುತ ವಾಸವಿರುವುದು ಆಂಧ್ರಪ್ರದೇಶದ ಗುಂಟೂರಿನಲ್ಲಿ. ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದತ್ತ ವಿಶೇಷ ಆಸಕ್ತಿ. ಬಿಡುವಿನ ವೇಳೆಯಲ್ಲಿ ಬ್ಲಾಗ್, ಕಥೆ, ಕವನ , ಲೇಖನಗಳನ್ನು ಬರೆಯುವುದು ಇವರ ಹವ್ಯಾಸ. ಇವರು ಬರೆದ ಲೇಖನಗಳು ಉದಯವಾಣಿ, ವಿಶ್ವವಾಣಿ, ವಿನಯವಾಣಿ, ಸುದ್ದಿ ಬಿಡುಗಡೆ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ರಾಧಾ ರಾಮ್ ಪ್ರಸಾದ್ ಅವರ ಇಂಗ್ಲೀಷಿನ ‘ಇನ್ ಎ ಹಾರ್ಟ್ ಬೀಟ್’ ಪುಸ್ತಕದ ಕನ್ನಡ ಅನುವಾದ ‘ತೆರೆದ ಮನಸ್ಸಿನ ಪುಟಗಳು’ ಇವರ ಮೊದಲ ಅನುವಾದಿತ ಕೃತಿ.